ಕವತ್ತಾರು ಅಬ್ಬಗ- ದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಇಂದು ಸಿರಿಜಾತ್ರೆ ಮಹೋತ್ಸವ

ಪಡುಬಿದ್ರಿ: ಕವತ್ತಾರು ಅಬ್ಬಗ- ದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ತಾ.15.4.2022ನೇ ಶುಕ್ರವಾರದಿಂದ ತಾ. 19.4.2022‌ರ ವರೆಗೆ ಅಬ್ಬಗ- ದಾರಗ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಲಿರುವುದು.

ಹುಣ್ಣಿಮೆ- ಸಿರಿಗಳ ಜಾತ್ರೆ:

16.4.2022 ಶನಿವಾರ ಮಧ್ಯಾಹ್ನ ಗಣಯಾಗ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಪೂರ್ವ ಸಂಪ್ರದಾಯ ಪ್ರಕಾರ ಅಜಿಲರ ಮನೆಯಿಂದ ದೇವಸ್ಥಾನಕ್ಕೆ ಭಂಡಾರ ಬಂದು ದೇವರ ಮಹಾಪೂಜೆ ಹಾಗೂ ಹುಣ್ಣಿಮೆ- ಸಿರಿಗಳ ಜಾತ್ರೆ ಜರಗಲಿದೆ.

17.4.2022 ಆದಿತ್ಯವಾರ ಬೆಳಿಗ್ಗೆ 9.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಾಯಂಕಾಲ ಅಂಬೋಡಿ (ಚೆಂಡು), ರಾತ್ರಿ ಉತ್ಸವ ಬಲಿ.

18.4.2022 ಸೋಮವಾರ ಮಧ್ಯಾಹ್ನ ವರಸರಿ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ಶ್ರೀ ಭೂತ ಬಲಿ, ಶಯನ.

19.4.2022 ಮಂಗಳವಾರ ಬೆಳಿಗ್ಗೆ 8:00 ಗಂಟೆಗೆ ಕವಾಟೋದ್ಘಾಟನೆ, ಪ್ರಸಾದ ವಿತರಣೆ, ರಾತ್ರಿ ಧೂಮಾವತಿ ದೈವದ ಭಂಡಾರ ಕ್ಷೇತ್ರಕ್ಕೆ ಬಂದು, ನಂತರ ದೇವರ ಬಲಿ ಹೊರಟು ಓಕುಳಿ, ಕಟ್ಟೆ ಪೂಜೆ, ಅವಭೃತ, ಧ್ವಜಾವರೋಹಣ.

20.4.2022 ಬುಧವಾರ ಬೆಳಿಗ್ಗೆ ಧೂಮಾವತಿ ದೈವದ ನೇಮೋತ್ಸವ, ಸಂಪೋಕ್ಷಣೆ, ಮಂತ್ರಾಕ್ಷತೆ.

21.4.2022 ಗುರುವಾರ ಬ್ರಹ್ಮಸ್ಥಾನದಲ್ಲಿ ಸಮಾರಾಧನೆ, ಹಾಗೂ ಅನ್ನಸಂತರ್ಪಣೆ‌ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.