ಕಟಪಾಡಿ: ಸಿಡಿಲು ಬಡಿದು ಯುವಕ ಸಾವು

ಕಟಪಾಡಿ: ಸಿಡಿಲು ಬಡಿದು ಯುವಕ ಸಾವು
ಉಡುಪಿ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಕಾಪು ತಾಲ್ಲೂಕಿನ ಕಟಪಾಡಿ ಏಣಗುಡ್ಡೆ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಕಟಪಾಡಿ ಏಣಗುಡ್ಡೆಯ ನಿವಾಸಿ ಭರತ್ (22) ಮೃತ ದುರ್ದೈವಿ. ಮನೆಯಲ್ಲಿ ಕುಳಿತಿದ್ದ ಭರತ್ ಗೆ ಸಿಡಿಲು ಬಡಿದಿದ್ದು, ಕೂಡಲೇ ಆತ ಕುಸಿದು ಬಿದ್ದಿದ್ದಾನೆ. ತಕ್ಷಣ ಮನೆಯವರು ಉಡುಪಿ‌ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಭರತ್ ಕೊನೆಯುಸಿರೆಳೆದಿದ್ದಾರೆ. ಕಾಪು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.