ಉಡುಪಿ: ಶನಿವಾರದಂದು ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಭೇಟಿ ನೀಡಿದರು.
ಪೂಜ್ಯ ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತ, ಅರ್ಚಕರ ವೇದ ಘೋಷ, ಕಳಶ ಹಾಗೂ ಮಂಗಳವಾದ್ಯದೊಂದಿಗೆ ಸ್ವಾಗತಿಸಿ ದೇವಾಲಯಕ್ಕೆ ಬರಮಾಡಿಕೊಂಡು ದೇವರ ಭೇಟಿ ಬಳಿಕ ದೇವಾಲಯದ ಯಾಗ ಮಂಟಪಕೆ ಆಗಮಿಸಿ ಶ್ರೀಮದ್ಭಾಗವತ ದಶಮ ಸ್ಕಂದ ಹವನದ ಮಹಾ ಪೂರ್ಣಾಹುತಿ ನೆರವೇರಿಸಲಾಯಿತು.
ಚೇಂಪಿ ಶ್ರೀಕಾಂತ್ ಭಟ್ ಹವನದ ಧಾರ್ಮಿಕ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು. ಸೇವಾದಾರರಾದ ಹ್ಯಾಂಗ್ಯೋ ಐಸ್ ಕ್ರೀಮ್ ಮಾಲಕ ಬಿ ಜಗದೀಶ್ ಪೈ ದಂಪತಿಗಳು ಪೂಜಾ ಕಾರ್ಯದಲ್ಲಿ ಸಹಕರಿಸಿದರು.
ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ ಇವರು ಶ್ರೀಪಾದರ ಪಾದ ಪೂಜೆ ನೆರವೇರಿಸಿ ಸ್ವಾಗತಿಸಿದರು. ಚೇಂಪಿ ರಾಮಚಂದ್ರ ಭಟ್ ಹಾಗೂ ವೈದಿಕ ವೃಂದದವರು ಪ್ರಾರ್ಥನೆ ನಡೆಸಿಕೊಟ್ಟರು.
ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಸಮಾರಂಭದಲ್ಲಿ ವಸಂತ ಕಿಣಿ, ವಿಶ್ವನಾಥ ಭಟ್, ಅಶೋಕ ಬಾಳಿಗಾ, ಗಣೇಶ ಕಿಣಿ, ರೋಹಿತಾಕ್ಷ ಪಡಿಯಾರ್, ಪುಂಡಲೀಕ್ ಕಾಮತ್ , ಶಾಂತಾರಾಮ್ ಪೈ, ವಿನಾಯಕ ಭಟ್, ದಯಾಘನ್ ಭಟ್, ಮಧುಕರ್ ಭಟ್, ಹರಿಪ್ರಸಾದ್ ಶರ್ಮ, ಪ್ರಕಾಶ್ ಭಕ್ತ, ಉಮೇಶ್ ಪೈ, ನಾರಾಯಣ ಪ್ರಭು, ಅರ್ಚಕ ವೃಂದ, ಜಿ. ಎಸ್. ಬಿ ಮಹಿಳಾ ಮತ್ತು ಯುವಕ ಮಂಡಳಿ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.