ಕಲ್ಯಾಣಪುರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ 132 ನೇ ವರ್ಷದ ವಾರ್ಷಿಕ ದೀಪೋತ್ಸವವು ಗುರುವಾರದಂದು ಸಂಪನ್ನಗೊಂಡಿತು. ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ನಾಗರಾಜ್ ಅಡಿಗ ನೆರವೇರಿಸಿದರು.
ದೇವಳದ ಮೊಕ್ತೇಸರ ಕೆ. ವಿ. ರಾವ್ ಅವರ ಮಾರ್ಗದರ್ಶನದಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ರಂಗಪೂಜೆ ನಡೆಯಿತು.
ಬಳಿಕ ನಾಗರಾಜ್ ಶೇಟ್ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಹಾ ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.
ನೂರಾರು ಭಕ್ತರು ದೇವರ ದರ್ಶನ ಪಡೆದರು.