ಕುಂದಾಪುರ ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿಗಳು ಕಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: 2023 ರ ಕಲೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಇನ್ವಿತಾ ಖಾರ್ವಿ ಚಿತ್ರ ಕಲೆಯಲ್ಲಿ, ಧಾರಿಣಿ ಕೆ. ಎಸ್ ಶಾಸ್ತ್ರೀಯ ಸಂಗೀತದಲ್ಲಿ, ಸೃಜನ್ ಎಸ್ ದೇವಾಡಿಗ ಜಾನಪದ ಗೀತೆ ಸ್ಪರ್ಧೆ ಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಕುಂದಾಪುರ: ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕಲೋತ್ಸವ ಸ್ಪರ್ಧೆಗೆ ಹೆಮ್ಮಾಡಿ ಜನತಾ ಕಾಲೇಜಿನ ಕೇದಾರ ಮರವಂತೆ ಆಯ್ಕೆ.

ಕುಂದಾಪುರ: ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯ ಮಾಧ್ಯಮಿಕ ಶಿಕ್ಷಣ ವಿಭಾಗವು ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ ಕಲಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ನಡೆಸುವ ರಾಷ್ಟ್ರ ಮಟ್ಟದ ಕಲಾ ಉತ್ಸವದಲ್ಲಿ ಭಾಗವಹಿಸಲು ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿ ಕೇದಾರ ಮರವಂತೆ ಆಯ್ಕೆಯಾಗಿದ್ದು, ಶಾಸ್ತ್ರೀಯ ಗಾಯನ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಕೇದಾರ ಅವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಗ್ವಾಲಿಯರ್ – ಪಾಟಿಯಾಲ – ಕಿರಾಣಾ ಘರಾಣೆಯ ಗಾಯಕ, ಗೋಪಾಡಿಯಲ್ಲಿ ನೆಲಸಿರುವ […]

ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಇದರ 10 ನೇ ಶಾಖೆ ಉದ್ಘಾಟನೆ; ಸಾಧಕರಿಗೆ ಸನ್ಮಾನ

ಉಡುಪಿ: ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ನೂತನ ವಾಣಿಜ್ಯ ಸಂಕೀರ್ಣ “ಸಹಕಾರ ಸಿಂಧು” ಹಾಗೂ ಹಂಪನಕಟ್ಟೆ-ಕೆಮ್ಮಣ್ಣಿನಲ್ಲಿ 10ನೇ ಶಾಖೆಯ ಉದ್ಘಾಟನಾ ಸಮಾರಂಭವು ನಡೆಯಿತು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸ್ಥಳೀಯ ಮಹನಿಯರನ್ನು ಗುರುತಿಸಿ ಗೌರವಿಸಿ, ಅಭಿನಂದಿಸಲಾಯಿತು. ಬಡ ರೋಗಿಗಳ ಪಾಲಿಗೆ ದೇವರಾದ “ಇಪ್ಪತ್ತು ರೂಪಾಯಿ ಡಾಕ್ಟರ್” ಎಂದೇ ಪ್ರಸಿದ್ಧಿ ಪಡೆದ ಡಾ. ಅಶ್ವಿನಿ ಕುಮಾರ್, ಸರ್ಪ ಸುತ್ತು ಕಾಯಿಲೆಗೆ ಔಷಧಿಯನ್ನು ನೀಡುತ್ತಾ ಸಾವಿರಾರು ಮಂದಿಯನ್ನು ಗುಣ ಪಡಿಸಿದ ವನಜಾ ಆಚಾರ್ಯ, […]

ವೀಟೋ ಚಲಾಯಿಸಿದ ಅಮೆರಿಕ : ಗಾಜಾದಲ್ಲಿ ಕದನ ವಿರಾಮ ಪ್ರಸ್ತಾಪ ವಿಶ್ವಸಂಸ್ಥೆಯಲ್ಲಿ ತಿರಸ್ಕೃತ

ನ್ಯೂಯಾರ್ಕ್ (ಅಮೆರಿಕ) : ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರಸ್ತುತಪಡಿಸಿದ ಈ ನಿರ್ಣಯದಲ್ಲಿ “ಗಾಜಾದಲ್ಲಿ ಯುದ್ಧವನ್ನು ತಕ್ಷಣವೇ ನಿಲ್ಲಿಸಲು ಮತ್ತು ಎಲ್ಲ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು” ಎಂಬ ಬೇಡಿಕೆ ಇಡಲಾಗಿತ್ತು. ಆದರೆ, ಈ ಪ್ರಸ್ತಾಪಕ್ಕೆ ಅಮೆರಿಕ ಅಡ್ಡಿಪಡಿಸಿದೆ. ಇದರಿಂದಾಗಿ ಪ್ರಸ್ತಾಪವನ್ನು ಅಮೆರಿಕ ಭದ್ರತಾ ಮಂಡಳಿಯಲ್ಲಿ ಅಂಗೀಕರಿಸಲಾಗಲಿಲ್ಲ. ಇಸ್ರೇಲ್ ಮತ್ತು ಹಮಾಸ್ ನಡುವೆ ಕಳೆದ 2 ತಿಂಗಳಿಗೂ ಹೆಚ್ಚು ದಿನದಿಂದ ಯುದ್ಧ ನಡೆಯುತ್ತಿದೆ. ಈ ನಡುವೆ ಒಂದು ವಾರ ಕದನ ವಿರಾಮ ಘೋಷಿಸಲಾಗಿತ್ತು. ಆದರೆ, ಒಂದು ವಾರದ ಬಳಿಕ […]

ಯು ಮುಂಬಾ ಪಲ್ಟಿ ಹೊಡಿಸಿದ ಪುಣೇರಿ ಪಲ್ಟನ್​ಗೆ ಎರಡನೇ ಗೆಲುವು : ಪ್ರೊ ಕಬಡ್ಡಿ 10ನೇ ಆವೃತ್ತಿ

ಬೆಂಗಳೂರು: ಶುಕ್ರವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 17 ರೈಡಿಂಗ್‌ಗಳಲ್ಲಿ 12 ಅಂಕಗಳನ್ನು ಗಳಿಸಿದ ಮೋಹಿತ್‌ ಗೋಯತ್ ಅವರು, ಪಲ್ಟನ್‌ ತಂಡದ ಅದ್ಭುತ ಜಯಕ್ಕೆ ಕಾರಣರಾದರು. ಯು ಮುಂಬಾ ತಂಡವನ್ನು 43- 32 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್‌ ತಂಡ ತನ್ನ ಎರಡನೇ ಗೆಲುವು ದಾಖಲಿಸಿದೆ.ಪ್ರೊ ಕಬಡ್ಡಿ 10ನೇ ಆವೃತ್ತಿಯ ನಿನ್ನೆ (ಶುಕ್ರವಾರ) ನಡೆದ ಪಂದ್ಯದಲ್ಲಿ ಯು ಮುಂಬಾ ಮಣಿಸಿ ಪುಣೇರಿ ಪಲ್ಟನ್ ತಂಡವು […]