ಕರ್ನಾಟಕ ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಮತಾದರರ ನೋಂದಣಿ ನಿಯಮಗಳು

ಉಡುಪಿ: ಕರ್ನಾಟಕ ನೈರುತ್ಯ ಪದವೀಧರರ/ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಮತದಾರರ ನೋಂದಣಿ ನಿಯಮಗಳು ಈ ಕೆಳಗಿನಂತಿವೆ.

ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆಗೆ ಮತದಾರರ ನೋಂದಣಿ ನಿಯಮಗಳು 1960 ರ 31(4) ನೇ ನಿಯಮದ ಅನುಸಾರ ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಮತ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು ಸಂಬಂಧಿಸಿದ ಶಿಕ್ಷಕರ ಮತ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಅರ್ಹರಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ನೋಂದಣಿ ನಿಯಮಗಳು 1960 ಕ್ಕೆ ಲಗತ್ತಿಸಿರುವ ಮತ್ತು
ಎರಡನೇ ಅನುಸೂಚಿಯಲ್ಲಿ ಪುನರುದ್ಧರಿಸಿರುವ ನಮೂನೆ -19 ರಲ್ಲಿ ಅರ್ಜಿಯನ್ನು 2023 ರ ನವೆಂಬರ್ 6 ಅಥವಾ ಅದಕ್ಕೂ ಮೊದಲು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿತ್ತು.

ಮೇಲೆ ತಿಳಿಸಲಾದ ಎಲ್ಲಾ ವ್ಯಕ್ತಿಗಳು ತಮ್ಮ ಹೆಸರನ್ನು ಇದುವರೆಗೂ ಸೇರಿಸದೆ ಇದ್ದಲ್ಲಿ ನಿಗದಿತ ನಮೂನೆ -19 ರಲ್ಲಿ 2023 ರ ನವೆಂಬರ್ 6 ರ ಒಳಗೆ ಅಥವಾ ಅದಕ್ಕೂ ಮುಂಚೆ ಅರ್ಜಿಗಳನ್ನು ಸಲ್ಲಿಸಬಹುದು.

ನೈರುತ್ಯ ಪದವೀಧರರ ಕ್ಷೇತ್ರದ ಮತಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆಗೆ ಮತದಾರರ ನೋಂದಣಿ ನಿಯಮಗಳು 1960 ರ 31(4) ನೇ ನಿಯಮದ ಅನುಸಾರ ಕರ್ನಾಟಕ ನೈರುತ್ಯ ಪದವೀಧರ ಮತ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು ಸಂಬಂಧಿಸಿದ ಪದವೀಧರರ ಮತ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಅರ್ಹರಿರುವ ಪ್ರತಿಯೊಬ್ಬ ವ್ಯಕ್ತಿಯು

ಮತದಾರರ ನೋಂದಣಿ ನಿಯಮಗಳು 1960 ಕ್ಕೆ ಲಗತ್ತಿಸಿರುವ ಮತ್ತು ಎರಡನೇ ಅನುಸೂಚಿಯಲ್ಲಿ ಪುನರುದ್ಧರಿಸಿರುವ ನಮೂನೆ -18 ರಲ್ಲಿ ಅರ್ಜಿಯನ್ನು 2023 ರ ನವೆಂಬರ್ 6 ಅಥವಾ ಅದಕ್ಕೂ ಮೊದಲು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿತ್ತು.

ಮೇಲೆ ತಿಳಿಸಲಾದ ಎಲ್ಲಾ ವ್ಯಕ್ತಿಗಳು ತಮ್ಮ ಹೆಸರನ್ನು ಇದುವರೆಗೂ ಸೇರಿಸದೆ ಇದ್ದಲ್ಲಿ ನಿಗದಿತ ನಮೂನೆ -18 ರಲ್ಲಿ 2023 ರ ನವೆಂಬರ್ 6 ರ ಒಳಗೆ ಅಥವಾ ಅದಕ್ಕೂ ಮುಂಚೆ ಅರ್ಜಿಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ವೆಬ್‌ಸೈಟ್  www.ceokarnataka.kar.nic.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ನೈರುತ್ಯ ಪದವೀಧರರ/ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.