ಕಾರ್ಕಳ: ಅರ್ಬಿ ಫಾಲ್ಸ್‌ ಗೆ ಬಿದ್ದು ಯುವಕ ಮೃತ್ಯು

ಕಾರ್ಕಳ: ಯುವಕನೊಬ್ಬ ಆಕಸ್ಮಿಕವಾಗಿ ಮುಂಡ್ಲಿ ಅರ್ಬಿ ಫಾಲ್ಸ್‌ ಗೆ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ವೇಣೂರು ಪಡ್ಯನಡ್ಕ ನಿವಾಸಿ ಕಿರಣ್‌ (21) ಮೃತ ಯುವಕ. ಈತ ತನ್ನ ಸ್ನೇಹಿತರೊಂದಿಗೆ ಕಾರ್ಕಳ ತೆಳ್ಳಾರು ಸಮೀಪದ ಮುಂಡ್ಲಿ ಅರ್ಬಿ ಫಾಲ್ಸ್‌ ವೀಕ್ಷಣೆಗೆ ಬಂದಿದ್ದ.

ಈ ವೇಳೆ ಆಯಾತಪ್ಪಿ ಕಿರಣ್ ಫಾಲ್ಸ್ ಗೆ ಬಿದ್ದು ಸಾವನ್ನಪ್ಪಿದ್ದಾನೆ. ಅಜೆಕಾರು ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.