ಸ್ವಚ್ಛ ಭಾರತ ಅಭಿಯಾನಕ್ಕೆ ಕಾರ್ಕಳ ವಿಘ್ನೇಶ್ ಟವರ್ಸ್ ನಿವಾಸಿಗಳು ಏನ್ ಕೊಡುಗೆ ಕೊಟ್ರು ಗೊತ್ತಾ?:ಕಸ ರಸ್ತೆಗೆ ಎಸೆದ್ರು !

ವರದಿ : ಚರಣ್ ಸಂಪತ್ ಕಾರ್ಕಳ

ಕಾರ್ಕಳ : ಅಪಾರ್ಟ್ ಮೆಂಟ್ ನ ಮಾಲಿಕ ಹಾಗೂ ನಿವಾಸಿಗಳ ನಡುವೆ ಜಟಾಪಟಿಯಿಂದಾಗಿ ಅಪಾಟ್೯ ಮೆಂಟ್ ನಿವಾಸಿಗಳು ತಮ್ಮ ಮನೆಯಲ್ಲಿನ ತಾಜ್ಯವನ್ನು ಸಾರ್ವಜನಿಕ ರಸ್ತೆಗೆ ತಂದು ಎಸೆಯುವ ಮೂಲಕ
ಸ್ವಚ್ಛ ಭಾರತ ಅಭಿಯಾನಕ್ಕೆ ಬೆಚ್ಚಿ ಬೀಳಿಸುವಂತಹ ಕೊಡುಗೆ ನೀಡಿ ಇದೀಗ ಸುದ್ದಿಯಾಗಿದ್ದಾರೆ.

ಈ ಕೊಡುಗೆ ನೀಡಿದವರು ಕಾರ್ಕಳ ವಿಘ್ನೇಶ್ ಟವರ್ಸ್ ನಿವಾಸಿಗಳು.

ಕಾರ್ಕಳ ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆ ‌ರಥ ಬೀದಿಯಲ್ಲಿರುವ ವಿಘ್ನೇಶ್ ಟವರ್ಸ್ ಮುಂಭಾಗದಲ್ಲಿ ಕಸದ‌ ರಾಶಿ‌ ಕಂಡುಬಂದಿದೆ. ಕಳೆದ ಎರಡು‌ ದಿನಗಳಿಂದ ತಾಜ್ಯ ಅದೇ ಜಾಗದಲ್ಲಿ ‌ಕೊಳೆಯುತ್ತಿದೆ. ಪುರಸಭೆ ಬಳಿ ಈ ತಾಜ್ಯದ ಬಗ್ಗೆ ವಿಚಾರಿಸಿದಾಗ‌ ಅದು‌ ನಮ್ಮಗೆ ಸಂಬಂದಿಸಿಲ್ಲ ಅಪಾಟ್೯ ಮೆಂಟ್ ನಿವಾಸಿಗಳ ಹಾಗೂ ಮಾಲಿಕರ ನಡುವಿನ ಜಟಾಪಟಿ ಯಿಂದಾಗಿ ಅವರು ರಸ್ತೆಗೆ ತಂದು ಎಸೆದಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು

.

ದುರಂತ ಎಂದರೆ ಅಪಾಟ್೯ ಮೆಂಟ್ ನಿವಾಸಿಗಳು ತಂದು ಸಾರ್ವಜನಿಕ ರಸ್ತೆಗೆ ‌ಎಸೆದಿದ್ದರೂ ಈ ಬಗ್ಗೆ ತಪ್ಪಿತಸ್ಥ ರ ವಿರುದ್ದ ಕ್ರಿಮಿನಲ್ ‌ಕೇಸ್ ದಾಖಲಿಸಿ ಕ್ರಮ ‌ವಹಿಸವುದನ್ನು ಬಿಟ್ಟು ಅವರೇ ತೆಗೆಯಬೇಕು ನಾವು ಯಾಕೆ ತೆಗೆಬೇಕು ಎಂದು ಪುರಸಭೆ ಅಧಿಕಾರಿಗಳು ಜಾರಿ ಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ‌ಮೋದಿಯ ಕನಸಾಗಿರುವ ಸ್ವಚ್ಚ ಭಾರತ ಯೋಜನೆಯನ್ನು ಈ ವಿಘ್ನೇಶ್ ಟವರ್ಸ್ ನಿವಾಸಿಗಳು ನುಚ್ವು ನೂರು ಮಾಡಿರುವುದು ಸತ್ಯ.

ಅಪಾಟ್೯ ಮೆಂಟ್ ಹಾಗೂ ನಿವಾಸಿಗಳ ನಡುವಿನ ಮನಸ್ತಾಪದಿಂದಾಗಿ ಈ ರೀತಿ ಘಟನೆಯಾಗಿದೆ. ಇದು ನಮ್ಮ ಗಮನಕ್ಕೆ ಬಂದಿದೆ. ಅದ್ರೆ ಅವರು ಮಾಡಿದ್ದನ್ನು ಅವರೇ ತೆಗೆಯಬೇಕು ಎಂದು ನಾವು ತಿಳಿಸಿದ್ದೇವೆ.

-ಮಂಜುನಾಥ ಕೆಎಸ್, ಪ್ರಬಾರ ಮುಖ್ಯಾಧಿಕಾರಿ

ಮಾಲಿಕರ ಹಾಗೂ ಕಟ್ಟಡ ನಿವಾಸಿಗಳ‌ ಜಗಳ ಆಗಿದ್ದಲ್ಲಿ
ಕಟ್ಟದ ಒಳಗೆ ಸುರಿಯಲಿ ಅದನ್ನು ಬಿಟ್ಟು  ಸಾರ್ವಜನಿಕ ರಸ್ತೆಗೆ ಎಸೆದು ಸಾರ್ವಜನಿಕರಿಗೆ ತೊಂದರೆ ಕೊಟ್ಟಲ್ಲಿ ಅವರ‌ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅಥವಾ ಡೋರ್ ನಂಬ್ರ ರದ್ದು ಮಾಡಿ.

-ಚರಣ್, ಸಾಮಾಜಿಕ ಕಾರ್ಯಕರ್ತ ಕಾರ್ಕಳ

 ನಾಳೆ ಬಂದು ಅವರ‌ ಮೇಲೆ ಕ್ರಮ ಕೈಗೊಳ್ಳುತ್ತೇವೆ.
ಡೋರ್ ನಂಬ್ರ ,ಪರವಾನಿಗೆ ರದ್ದು ಮಾಡಲು ಸಾದ್ಯವಿಲ್ಲ
-ಮಧನ್ ಪರಿಸರ ಅಭಿಯಂತರರು, ಪುರಸಭೆ