ಕಾರ್ಕಳ: ಕೋಮಕ್ಕೆ ಜಾರಿದ ತಾಲೂಕು ಆಸ್ಪತ್ರೆ! ರೋಗಿ ವಾಡ್೯ಗಳಲ್ಲಿ‌ ನೀರು, ವೈದ್ಯರ ಕೊಠಡಿ ಅಸಹ್ಯ: ಶಾಸಕರೂ ತಲೆಕೆಡಿಸಿಕೊಂಡಿಲ್ಲ ಅಂದ ವೈದ್ಯರು

-ಚಿತ್ರ ವರದಿ:ಚರಣ್ ಸಂಪತ್ ಕಾರ್ಕಳ

ಕಾರ್ಕಳ: ತಾಲೂಕು ಆಸ್ಪತ್ರೆ ‌ಇದೀಗ ಪಕ್ಕಾ ಕೋಮಕ್ಕೆ ಜಾರಿ ಹೋಗಿದೆ. ವೈದ್ಯರ ಕೊಠಡಿ ಸ್ವಚ್ವಗೊಳಿಸದೇ  ಅದೆಷ್ಟು ವರ್ಷ ಕಳೆದಿದೆ ಎಂಬುದನ್ನು ಆ ಭಗವಂತನೇ ಬಲ್ಲ.
ಕೊಠಡಿ ಗಬ್ಬು ವಾಸನೆ ಜತೆಗೆ ಇನ್ನಿತರ ಕಾಯಿಲೆ ಹರಡುವ ಸೂಚನೆ ಒಂದು ಕಡೆಯಾದರೆ. ಅನಾರೋಗ್ಯದ ಸಮಸ್ಯೆಯಿಂದ ಚಿಕಿತ್ಸೆಗೆ ಆಗಮಿಸುವ ರೋಗಿಗಳು ಇದೀಗ ಸರಕಾರಿ ಆಸ್ಪತ್ರೆ ಯಿಂದ ಉಚಿತವಾಗಿ ಮತ್ತೆ ರೋಗದ‌ ಜತೆ ಮನೆಗೆ ತೆರಳಬೇಕಾದ ಸ್ಥಿತಿ ಮತ್ತೊಂದು ಕಡೆ ನಿರ್ಮಾಣವಾಗಿದೆ.ಈ ಕುರಿತು ಕಾರ್ಕಳ ಶಾಸಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸಿದರೂ ಅವರು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ ಎನ್ನುತ್ತಾರೆ ಇಲ್ಲಿನ ವೈದ್ಯರು.

ಈವಿಡಿಯೋ ನೋಡಿ ಗೊತ್ತಾಗುತ್ತೆ ಆಸ್ಪತ್ರೆ ಸ್ಥಿತಿ

ಗಬ್ಬು ನಾರುತ್ತಿರುವ ಕೊಠಡಿಗಳಿಂದ  ಒಂದು ಕಾಯಿಲೆ ಬಂದಂತಹ ರೋಗಿಗಳು ಮತ್ತೊಂದು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಹೆರಿಗೆ ವಾಡ್೯, ಒಳರೋಗಿ ವಾಡ್೯ಗಳು ನೀರು ತುಂಬಿದ ಗದ್ದೆಯಂತಾಗಿದೆ. ಒಳರೋಗಿಯಾಗಿ ದಾಖಲಾಗಿರುವ ರೋಗಿಗಳ‌ ಪಾಡು ಶೋಚನೀಯವಾಗಿರುವುದು ಸತ್ಯ. ಸರಕಾರಿ ಆಸ್ಪತ್ರೆ ಗೆ‌ ಹೆಚ್ಚಾಗಿ ಗ್ರಾಮೀಣ ಭಾಗದಿಂದ ಬಡ‌ವರು ಆಗಮಿಸುತ್ತಿದ್ದು  ಇಲ್ಲಿನ ಹಾಳು ವ್ಯವಸ್ಥೆ ಬಗ್ಗೆ ಅವರಿಗೆ ಮಾತನಾಡಲು ಸಾದ್ಯವಾಗುತ್ತಿಲ್ಲ. ಕಾರಣ ಅವರಲ್ಲಿನ ‌ಮುಗ್ದತೆ ಹಾಗೂ ಅವರಲ್ಲಿನ ತಾಳ್ಮೆ ಯ ದೆಸೆಯಿಂದಾಗಿಯೇ.

ಭಗವಂತಾ ಇದ್ಯಾವ್ ಸೀಮೆ ಆಸ್ಪತ್ರೆ !

ಮಹಡಿ‌ ಸೋರುತ್ತಿದ್ದು ನಾವು ಮಲಗುವ ಕೋಣೆಯಲ್ಲಾ ನೀರು ತುಂಬಿದೆ. ಹೆರಿಗೆಗಾಗಿ ಬಂದ‌ ನಾವು‌ ೀ ಸ್ಥಿತಿ ಕಂಡು ಬೆಚ್ಚಿದ್ದೇವೆ. ಇಲ್ಲಿ ಇದೀಗ ಭಯದ ವಾತಾವರಣ ‌ನಿರ್ಮಾಣವಾಗಿದೆ. ದೇವರ ಮೇಲೆ ಭಾರ ಹಾಕಿ‌ ಇಲ್ಲಿ ಇದ್ದೇವೆ ಎನ್ನುತ್ತಾರೆ ತಮ್ಮ ಸಂಬಂಧಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ ಮಹಿಳೆ ಸುಗುಂಧಿ. ಅಂತೂ ಈ ತಾಲೂಕು ಆಸ್ಪತ್ರೆ ಸ್ಥಿತಿ ಅಧೋಗತಿಗೆ ಜಾರಿದ್ದು ಹೇಳುವವರೇ ಇಲ್ಲ ಅನ್ನೋ ಸ್ಥಿತಿ ನಿರ್ಮಾಣವಾಗಿದೆ.

ನಿರ್ಮಿತ ಕೇಂದ್ರ ವತಿಯಿಂದ‌ ಕಟ್ಟಡ ರಚನೆಯಾಗುವ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ರಚಿಸಿದ್ದೇ ಈ ಸಮಸ್ಯೆಗೆ ಕಾರಣ. ಈ ಬಗ್ಗೆ ‌ಶಾಸಕರು‌, ಸಂಬಂಧದ ಪಟ್ಟ‌ ಅಧಿಕಾರಿಗಳ‌ ಗಮನಕ್ಕೂ ತಂದಿದ್ದೇನೆ‌ಯಾದರೂ  ಪ್ರಯೋಜನವಾಗಿಲ್ಲ

ಡಾ ಕೇಶವ್ ಮಲ್ಯ
ಅರೋಗ್ಯಾಧಿಕಾರಿ ತಾಲೂಕು‌ ಆಸ್ಪತ್ರೆ