ಸೂಡ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

ಕಾರ್ಕಳ: ಕಾರ್ಕಳ ತಾಲೂಕಿನ ಸೂಡದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 2ರಂದು ಸೋಮವಾರ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ನಡೆಯಲಿದೆ.
ಮಧ್ಯಾಹ್ನ 1 ಗಂಟೆಯಿಂದ ಸಾರ್ವಜನಿಕ ಮಹಾಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಎಂಟಕ್ಕೆ ಬಲಿ, ರಥೋತ್ಸವ.
ರಾತ್ರಿ ಗಂಟೆ 10.30 ರಿಂದ ಶ್ರೀ ಮಯೂರವಾಹನ ಯಕ್ಷಗಾನ ನಾಟಕ ಸಭಾ ಸೂಡಾ ಇವರಿಂದ ತುಳು ಯಕ್ಷಗಾನ ಬಯಲಾಟ ಗುಣಸುಂದರಿ-ಪಾಪಣ್ಣ ವಿಜಯ ನಡೆಯಲಿದೆ.
ಡಿಸೆಂಬರ್ 5 ಗುರವಾರ ಮಹಾರಥೋತ್ಸವ  ಜರಗಲಿರುವುದು ಎಂದು ಪ್ರಕಟನೆ ತಿಳಿಸಿದೆ.