ಕಾಲಿಗೆ ಕೋಳ ಬಿಗಿದು ಪಂಚಗಂಗಾವಳಿ ನದಿಯಲ್ಲಿ ಈಜಿದ ಛಲಗಾರ: ದಾಖಲೆ ಬರೆದ್ರು ಖಾರ್ವಿಕೇರಿಯ ಸಂಪತ್

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಇಲ್ಲಿನ ಖಾರ್ವಿಕೇರಿಯ ಈಜು ಪ್ರತಿಭೆ ಕುಂದಾಪುರ ಭಂಡಾರ್ಸ್‍ಕಾರ್ಸ್ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಸಂಪತ್ ಡಿ ಖಾರ್ವಿ ಕಾಲಿಗೆ ಸರಪಳಿ ಕಟ್ಟಿ 25ಕಿಮೀ ಈಜುವ ಮೂಲಕ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಭಾನುವಾರ ಮಧ್ಯಾಹ್ನ 2ಗಂಟೆಗೆ ಬಸ್ರೂರು ರೈಲು ಸೇತುವೆ ಬಳಿಯಿಂದ ನದಿಗೆ ಇಳಿದು ಈಜಲು ಆರಂಭಿಸಿದ ಸಂಪತ್ ಸಂಜೆ 5ಗಂಟೆ 5ನಿಮಿಷಕ್ಕೆ 25ಕಿ.ಮೀ ದೂರದ ಗಂಗೊಳ್ಳಿ ಬಂದರುವಿಗೆ ತಲುಪಿದ್ದಾರೆ. ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿಯವರು ಸಂಪತ್ ಅವರ ಕಾಲುಗಳಿಗೆ ಮಧ್ಯಾಹ್ನ […]

ಸಮಾಜದ ಪರಿಕಲ್ಪನೆಯಲ್ಲಿ ಎಲ್ಲರ ಒಳಗೊಳ್ಳುವಿಕೆ ಮುಖ್ಯ: ಡಾ.ಎಂ.‌ಮೋಹನ್ ಆಳ್ವ

ಉಡುಪಿ: ಜಾತಿ, ಧರ್ಮವನ್ನು ಸಮಾಜವೆಂದು ಪರಿಗಣಿಸಲು ಸಾಧ್ಯವಿಲ್ಲ. ಸಮಾಜದ ಪರಿಕಲ್ಪನೆಯಲ್ಲಿ ಎಲ್ಲರ ಒಳಗೊಳ್ಳುವಿಕೆಯೇ ಬಹಳ ಮುಖ್ಯ ಎಂದು ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್‌ ಆಳ್ವಾ ಹೇಳಿದರು. ಉಡುಪಿ ಹೋಟೆಲ್‌ ಸ್ವದೇಶ್‌ ಹೆರಿಟೇಜ್‌ ಸಭಾಂಗಣದಲ್ಲಿ ಭಾನುವಾರ ನಡೆದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ನ ‘ವಿಂಶತಿ ಸಂಭ್ರಮ–2019’ ಕಾರ್ಯಕ್ರಮದಲ್ಲಿ ತಾರಾನಾಥ ಮೇಸ್ತ ಶಿರೂರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಕುರಿತು ಬರೆದ ‘ಆಪತ್ಬಾಂಧವ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇಂದು ಧರ್ಮ ಹಾಗೂ […]

ಆಟೋಗೆ‌ ಲಾರಿ ಢಿಕ್ಕಿ: ಮಹಿಳೆ ಸಾವು, ಚಾಲಕ ಗಂಭೀರ

ಮಂಗಳೂರು: ಲಾರಿ ಹಾಗೂ ಆಟೋ ನಡುವೆ ನಡೆದ ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣ ನಡೆಸುತ್ತಿದ್ದ ಮಹಿಳೆ ಸಾವನ್ನಪ್ಪಿ,  ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು ಕದ್ರಿ ಕಂಬ್ಲ ರಸ್ತೆ ಸಮೀಪ ನಡೆದಿದೆ. ಬಿಜೈ ನಿವಾಸಿ ಶೈಲಜಾ ಸಾವನ್ನಪ್ಪಿದ ಮಹಿಳೆ. ಇವರು ಪಣಂಬೂರಿನ ಕೇಂದ್ರಿಯ ವಿದ್ಯಾಲಯ ಶಾಲೆಯ ಶಿಕ್ಷಕಿಯಾಗಿದ್ದರು. ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕಡೆಯಿಂದ ಕೆ.ಪಿ.ಟಿ ಕಡೆ ಬರುತ್ತಿದ್ದ ಲಾರಿ ಎದುರಿಗೆ ಬಂದ ಆಟೋಗೆ ಡಿಕ್ಕಿಯಾಗುದನ್ನು ತಪ್ಪಿಸಲು ಮುಂದಾಗಿ ಬಂಟ್ಟ್ ಹಾಸ್ಟೆಲ್ ಕಡೆ ಹೋಗುತ್ತಿದ್ದ ಮತ್ತೊಂದು ಆಟೋಗೆ ಡಿಕ್ಕಿ […]

ಸೂಡ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

ಕಾರ್ಕಳ: ಕಾರ್ಕಳ ತಾಲೂಕಿನ ಸೂಡದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 2ರಂದು ಸೋಮವಾರ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಸಾರ್ವಜನಿಕ ಮಹಾಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಎಂಟಕ್ಕೆ ಬಲಿ, ರಥೋತ್ಸವ. ರಾತ್ರಿ ಗಂಟೆ 10.30 ರಿಂದ ಶ್ರೀ ಮಯೂರವಾಹನ ಯಕ್ಷಗಾನ ನಾಟಕ ಸಭಾ ಸೂಡಾ ಇವರಿಂದ ತುಳು ಯಕ್ಷಗಾನ ಬಯಲಾಟ ಗುಣಸುಂದರಿ-ಪಾಪಣ್ಣ ವಿಜಯ ನಡೆಯಲಿದೆ. ಡಿಸೆಂಬರ್ 5 ಗುರವಾರ ಮಹಾರಥೋತ್ಸವ  ಜರಗಲಿರುವುದು ಎಂದು ಪ್ರಕಟನೆ ತಿಳಿಸಿದೆ.

ಕಲ್ಲಂಗಳ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ

ಉಡುಪಿ: ಶ್ರೀ ವಾಸುಕೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಕಲ್ಲಂಗಳ ಇಲ್ಲಿ ಡಿ.2ರಂದು ಸೋಮವಾರ ವಾರ್ಷಿಕ ಷಷ್ಠಿ ಮಹೋತ್ಸವ, ರಥೋತ್ಸವ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ‌ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಡಿ. 3ರಂದು‌ ಮಂಗಳವಾರ ನಾಗಮಂಡಲ, ಡಿ. 4ರಂದು ಬುಧವಾರ ಲಕ್ಷ ಪುಷ್ಪಾರ್ಚನೆ, ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ ಎಂದು‌ ದೇವಸ್ಥಾನದ ಪ್ರಕಟನೆ ತಿಳಿಸಿದೆ.