ಕಾರ್ಕಳ: 10 ಬೆಡ್ ಗಳ ಸುಸಜ್ಜಿತ ಕೋವಿಡ್-19 ICU ಸೆಂಟರ್ ಉದ್ಘಾಟನೆ

ಕಾರ್ಕಳ: ಕಾರ್ಕಳದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ನೂತನವಾಗಿ ಸಿದ್ದಗೊಂಡ 10 ಬೆಡ್ ಗಳ ಸುಸಜ್ಜಿತ ಕೋವಿಡ್-19 ICU ಸೆಂಟರ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಂಗಳವಾರ ಉದ್ಘಾಟಿಸಿದರು.

ಶಾಸಕ ವಿ. ಸುನಿಲ್ ‌ಕುಮಾರ್ ಅವರ ವಿಶೇಷ ಮುತುವರ್ಜಿಯಿಂದ ನಿರ್ಮಾಣ ಗೊಂಡ ಈ ಘಟಕದಲ್ಲಿ 10 ಬೆಡ್ ಗಳಿದ್ದು, 5 ವೆಂಟಿಲೇಟರ್, 3 ಎಚ್ ಎಫ್ ಎನ್ ಒ, 10 ಮಾನಿಟರ್ ವ್ಯವಸ್ಥೆಗಳಿವೆ.
ಶಾಸಕ‌ ವಿ. ಸುನಿಲ್‌ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ‌ ಜಿಲ್ಲಾಧ್ಯಕ್ಷ ಕುಯಿಲಾಡಿ  ಸುರೇಶ್ ನಾಯಕ್, ಬಿಜೆಪಿ ಪದಾಧಿಕಾರಿಗಳು, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು ಭಾಗಿಯಾಗಿದ್ದರು.