ವರದಿ-ಸಂಪತ್ ಚರಣ್, ಕಾರ್ಕಳ
ಕಾರ್ಕಳ : ಜನಸ್ನೇಹಿ ಅಡಳಿತವನ್ನು ನಾವೆಲ್ಲಾ ಕೇಳಿದ್ದೇವೆ ಕಂಡಿದ್ದೇವೆ. ಮಳೆಗಾಲ ಪ್ರಾರಂಭದಲ್ಲಿ ಮಳೆಯ ಆರ್ಭಟಕ್ಕೆ ಓಡಾಟ ನಡೆಸುವುದೇ ಕಷ್ಟ ಅಂತಹದ್ರಲ್ಲಿ ಸಾರ್ವಜನಿಕರಿಗೆ ತಮ್ಮ ದಿನನಿತ್ಯದ ಕೆಲಸಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಇದೀಗ ಕಾರ್ಕಳ ತಾಲೂಕಿನಲ್ಲಿ ಮಳೆಯೂ ಜನಸ್ನೇಹಿಯಾಗಿದೆ.
ಜೂನ್ ತಿಂಗಳಿನಲ್ಲಿ ಆರಂಭವಾಗಬೇಕಾದ ಮಳೆಗಾಲ ಆರಂಭದಲ್ಲಿ ಕೈ ಕೊಟ್ಟ ಹಿನ್ನಲೆಯಲ್ಲಿ ಈ ಬಾರಿ ಮಳೆಗಾಲ ವಿಳಂಭವಾಗಿ ಸುರಿದಿತ್ತು. ಜೂನ್ 15 ರ ನಂತರ ಮಳೆ ಸುರಿಯುವ ಮೂಲಕ ಜನತೆಗೆ ಮಳೆಗಾಲದ ಮುನ್ನಸ್ಸೂಚನೆ ನೀಡಿತ್ತು. ಇದೀಗ ಕಾರ್ಕಳ ತಾಲೂಕಿನಾದ್ಯಂತ ಮಳೆ ಮತ್ತೆ ಕೈಕೊಟ್ಟ ಪರಿಣಾಮ ಬಿಸಿಲಿನ ತಾಪ ಮತ್ತೆ ಹೆಚ್ಚಿದೆ. ಬೆಳ್ಳಗ್ಗೆ ಬಿಸಿಲಿನ ವಾತಾವರಣ ಕೂಡಿದ್ದು ರಾತ್ರಿಯಾಗುತ್ತಿದ್ದಂತೆ ಮಳೆ ಪ್ರಾರಂಭಿಸುತ್ತಿದೆ.
ಬೆಳ್ಳಗ್ಗೆ ಬಿಸಿಲಿನಿಂದ ಕೂಡಿದ ವಾತಾವರಣ, ರಾತ್ರಿ ಮಳೆ ಸುರಿದ ಹಿನ್ನಲೆಯಲ್ಲಿ ವಾತಾವರಣದ ಏರುಪೇರಿನಿಂದ ಜನತೆಯ ಆರೋಗ್ಯದಲ್ಲಿಯೂ ಏರುಪೇರು ಕಂಡಿದೆ.
ಜನ ಏನಂತಾರೆ?
ಪ್ರಕೃ ತಿ ಯ ಅಸಮತೋಲನ ದಿಂದಾಗಿ ಇಂತಹ ವಾತಾವರಣ ಸೃಷ್ಟಿಯಾಗಿದೆ. ವಿಪರೀತ ಮರಗಳನ್ನು ಧಾರಶಾಹಿ ಮಾಡಿರುವುದರಿಂದ ಪ್ರಕೃತಿ ಮುನಿಸಿ ಕೊಂಡಿದೆ
* ಗಿರೀಶ್ ಕುಡ್ವ, ಪರಿಸರ ಪ್ರೇಮಿ
ಒಂದು ಕಡೆ ರಸ್ತೆ ಅಗಲಿಕರಣ ನೆಪದಲ್ಲಿ ತಾಲೂಕಿನಲ್ಲಿರುವ ಲಕ್ಷ ಗಟ್ಟಲೆ ಮರಗಳನ್ನು ಕಡಿದು ನಾಶಪಡಿಸಲಾಗಿದೆ.ಮತ್ತೊಂದು ಕಡೆ ಭೂ ಪರಿವರ್ತನೆಗೊಳಿಸಿ ಕೃಷಿ ಜಮೀನಲ್ಲಿರುವ ಮರಗಳನ್ನು ನಾಶ ಪಡಿಸಿ ಲೇಔಟ್ ಮಾಡಿರುವುದರ ಪರಿಣಾಮ ಪ್ರಕೃತಿ ಅಸಮತೋಲನಕ್ಕೆ ಕಾರಣವಾಗಿದೆ.
* ಹರೀಶ್ ನಾಯಕ್ ಕುಕ್ಕುಂದೂರು ( ಕೃಷಿಕರು)
ಕೃಷಿ ಜಮೀನನ್ನು ಯಾವುದೇ ಕಾರಣಕ್ಕೆ ಭೂ ಪರಿವರ್ತನೆ ಅವಕಾಶ ನೀಡಬಾರದು. ನಿವೇಶನಕ್ಕೆ ಅಗತ್ಯ ಇದ್ದಷ್ಟೇ ಭೂಮಿ ಪರಿವರ್ತನೆ ಗೊಳಿಸಬೇಕು.
* ಲಕ್ಷ್ಮಿ ಚರಣ್ ನಾಯಕ್ ಸಮಾಜಿಕ ಕಾರ್ಯಕರ್ತ