‘ಸ್ಯಾಟ್‍ಕಾಮ್’ ತರಬೇತಿ ಕಾರ್ಯಕ್ರಮ

ಬೆಂಗಳೂರು: ಕರ್ನಾಟಕ ಜೀವವೈವಿಧ್ಯ ಮಂಡಳಿಯು ರಾಜ್ಯದ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಕಾರ್ಯಪ್ರವೃತ್ತಿಗೊಳಿಸಲು, ಅಬ್ದುಲ್ ನಜೀರ್‍ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು (SATCOM) ಮುಖಾಂತರ ‘ಸ್ಯಾಟ್‍ಕಾಮ್’ ತರಬೇತಿ ಕಾರ್ಯಕ್ರಮವನ್ನು ಜೂ.20ರಂದು ಆಯೋಜಿಸಲಾಯಿತು. ತರಬೇತಿ ಕಾರ್ಯಕ್ರಮವನ್ನು 139 ತಾಲ್ಲೂಕುಗಳಲ್ಲಿ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರುಗಳಿಗೆ, ಚುನಾಯಿತ ಅಧಿಕಾರಿಗಳಿಗೆ, ನಾಟಿವೈದ್ಯರುಗಳಿಗೆ ಮತ್ತು ಇಲಾಖಾ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಯಿತು. ತರಬೇತುದಾರರ ತರಬೇತಿ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಭಾಗವಹಿಸಿದ್ದವರನ್ನು […]

ಕೊರಂಗ್ರಪಾಡಿ ಅಪಘಾತ: ಗಾಯಾಳು ವಿದ್ಯಾರ್ಥಿ ಮೃತ್ಯು

ಉಡುಪಿ, ಜೂ.24: ಕೊರಂಗ್ರಪಾಡಿ ಸಮೀಪ ಜೂ.19ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉದ್ಯಾವರ ಕೊರಂಗ್ರಪಾಡಿಯ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿ ರೋಶನ್ (16) ಎಂಬವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪಣಿಯಾಡಿ ಬುಡ್ನಾರು ನಿವಾಸಿ ರಿಯಾಝ್ ಎಂಬವರ ಏಕೈಕ ಪುತ್ರರಾಗಿದ್ದ ರೋಶನ್, ಜೂ.19ರಂದು ಬೆಳಗ್ಗೆ ತನ್ನ ತಂದೆಯ ರಿಕ್ಷಾದಲ್ಲಿ ವಿಶೇಷ ತರಗತಿಗಾಗಿ ಶಾಲೆಗೆ ತೆರಳುತ್ತಿದ್ದರು. ಕುಕ್ಕಿಕಟ್ಟೆ ಕಡೆಯಿಂದ ಕೊರಂಗ್ರಪಾಡಿ ಕಡೆಗೆ ಹೋಗುತ್ತಿದ್ದ ರಿಕ್ಷಾ ವಾಹನವೊಂದನ್ನು ಓವರ್ ಟೇಕ್ […]

ಹಾಸನ: ಗೋವಿನಿಂದಲೇ ಸಾವಿಗೀಡಾದ ಗೋಕಳ್ಳ…! 

ಹಾಸನ: ಗೋವು ಕಳ್ಳತನ ಮಾಡಲು ಹೋದ  ವ್ಯಕ್ತಿಯೋರ್ವ ಗೋವಿನಿಂದಲೇ ಸಾವೀಗೀಡಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಗೋಕಳ್ಳ  ಗೋವಿಂದಪ್ಪ ಮೃತಪಟ್ಟವನು. ತೋಟದ ಮನೆಯಲ್ಲಿದ್ದ ಹಸುವೊಂದನ್ನು‌ ಕಳ್ಳತನ ಮಾಡಿ ಸ್ವಲ್ಪ ದೂರ ಸಾಗಿಸಿದ್ದ. ಅನಂತರ ನಿರ್ಜನ ಪ್ರದೇಶದಲ್ಲಿ ಗೋವಿನ ಕಾಲನ್ನು ಕಟ್ಟಲು ಮುಂದಾದಾಗ ಆತನ ಮರ್ಮಾಂಗಕ್ಕೆ ಗೋವು ಒದ್ದಿರುವ ಪರಿಣಾಮ ಸ್ಥಳದಲ್ಲೇ ಆತ ಸಾವಿಗೀಡಾಗಿದ್ದಾನೆ‌ ಎನ್ನಲಾಗಿದೆ. ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದೆ ಎನ್ನಲಾಗಿದ್ದು, ಈ ಘಟನೆ ಸಂಬಂಧಿಸಿದಂತೆ ನುಗ್ಗೆಹಳ್ಳಿ ಪೊಲೀಸ್ […]

ಕಾರ್ಕಳದಲ್ಲಿ ಜನ ಸ್ನೇಹಿಯಾಗಿದೆ ಮಳೆ: ಸೆಕೆಯೋ ಸೆಕೆ ಅಂತಿದ್ದಾರೆ ಊರ ಜನರು

ವರದಿ-ಸಂಪತ್ ಚರಣ್, ಕಾರ್ಕಳ ಕಾರ್ಕಳ : ಜನಸ್ನೇಹಿ ಅಡಳಿತವನ್ನು ನಾವೆಲ್ಲಾ ಕೇಳಿದ್ದೇವೆ ಕಂಡಿದ್ದೇವೆ. ಮಳೆಗಾಲ ಪ್ರಾರಂಭದಲ್ಲಿ ಮಳೆಯ ಆರ್ಭಟಕ್ಕೆ ಓಡಾಟ ನಡೆಸುವುದೇ ಕಷ್ಟ ಅಂತಹದ್ರಲ್ಲಿ‌ ಸಾರ್ವಜನಿಕರಿಗೆ ತಮ್ಮ ದಿನನಿತ್ಯದ ಕೆಲಸಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಇದೀಗ ಕಾರ್ಕಳ ತಾಲೂಕಿನಲ್ಲಿ ಮಳೆಯೂ ಜನಸ್ನೇಹಿಯಾಗಿದೆ.ಜೂನ್ ತಿಂಗಳಿನಲ್ಲಿ ಆರಂಭವಾಗಬೇಕಾದ ಮಳೆಗಾಲ ಆರಂಭದಲ್ಲಿ ಕೈ ಕೊಟ್ಟ ಹಿನ್ನಲೆಯಲ್ಲಿ ಈ ಬಾರಿ ಮಳೆಗಾಲ ವಿಳಂಭವಾಗಿ ಸುರಿದಿತ್ತು. ಜೂನ್ 15 ರ ನಂತರ ಮಳೆ‌ ಸುರಿಯುವ ಮೂಲಕ ಜನತೆಗೆ ಮಳೆಗಾಲದ ಮುನ್ನಸ್ಸೂಚನೆ ನೀಡಿತ್ತು. ಇದೀಗ ಕಾರ್ಕಳ […]

ಮಂಗಳೂರು: ಕೇಂದ್ರ ಸರಕಾರ ಗೋಹತ್ಯೆ ನಿಷೇಧಿಸಲಿ: ಯು.ಟಿ ಖಾದರ್

ಮಂಗಳೂರು: ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ನಡೆಯುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅಕ್ರಮ ಗೋ ಸಾಗಾಟದ ವಿರುದ್ಧ ಹೋರಾಟ ಅಗತ್ಯ. ಎಲ್ಲಾ ಧರ್ಮೀಯರು ಅಕ್ರಮ ಗೋಸಾಗಾಟವನ್ನು ವಿರೋಧಿಸುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರ ದೇಶದಲ್ಲಿ ಗೋಹತ್ಯೆ ನಿಷೇಧಿಸಲಿ ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಡೆಂಘಿ ಪ್ರಕರಣ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ: ಮಂಗಳೂರಲ್ಲಿ ಡೆಂಘಿ ಜ್ವರ ಪ್ರಕರಣ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಿ ಮಾಹಿತಿ ಪಡೆದಿದ್ದೇನೆ. ಜತೆಗೆ ಮುನ್ನೆಚ್ಚರಿಕೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಅವರು‌ ತಿಳಿಸಿದರು. ಐಎಂಎ […]