ಕಾರ್ಕಳ: ಕಾರ್ಕಳ ಜೋಡುರಸ್ತೆ ಪೂರ್ಣಿಮಾ ಪೂರ್ಣಿಮಾ ಸಿಲ್ಕ್ಸ್ ವಸ್ತ್ರ ಮಳಿಗೆಗೆ ಶಿವಮೊಗ್ಗ ಸಂಸದ ರಾಘವೇಂದ್ರ ಯಡಿಯೂರಪ್ಪ ಭೇಟಿ ನೀಡಿದರು.
ಅವರು, ಯಾವುದೇ ನಗರ, ಪಟ್ಟಣ ಇರಲಿ ಅದರ ಅಭಿವೃದ್ಧಿ ಕಾರ್ಯದಲ್ಲಿ ಬೃಹತ್ ಮಾಲ್ಗಳ ಪಾತ್ರ ಮಹತ್ವದಾಗಿದ್ದು, ಪೂರ್ಣಿಮಾ ಲೈಫ್ ಸ್ಟೈಲ್ ನಾಗರಿಕರಿಗೆ ಹೊಸತನ ನೀಡಲಿ ಎಂದು ಇದೇ ಸಂದರ್ಭದಲ್ಲಿ ರಾಘವೇಂದ್ರ ಯಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಯಡಿಯೂರಪ್ಪ ರವರನ್ನು ರವಿ ಪ್ರಕಾಶ್ ಪ್ರಭು ರವರು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.
ಮಾ.10ಕ್ಕೆ ಪ್ರೈಮ್ ಮಾಲ್ನಲ್ಲಿ ಪೂರ್ಣಿಮಾ ಲೈಫ್ ಸ್ಟೈಲ್ ಉದ್ಘಾಟನೆ:
ಕಾರ್ಕಳದ ಬಿ. ಜೆ. ಪಿ. ಹಿರಿಯ ಮುಖಂಡ ಕೋಶಾಧಿಕಾರಿಯಾಗಿದ್ದ ದಿ. ಪಾಂಡುರಂಗ ಪ್ರಭುರವರ ಪುತ್ರ ರವಿ ಪ್ರಕಾಶ್ ಪ್ರಭು ಅವರ ಮಾಲಕತ್ವದ ಸಂಸ್ಥೆ ಇದಾಗಿದೆ.
ಪೂರ್ಣಿಮಾ ಸಮೂಹ ಸಂಸ್ಥೆಯ ಮತ್ತೊಂದು ಮಳಿಗೆಯಾಗಿರುವ ಜೋಡುರಸ್ತೆಯ ಪ್ರೈಮ್ ಮಾಲ್ನಲ್ಲಿ ಪೂರ್ಣಿಮಾ ಲೈಫ್ ಸ್ಟೈಲ್ ಮಾರ್ಚ್ ೧೦ ರಂದು ಸಚಿವ ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಹರ್ಷೇಂದ್ರ ಕುಮಾರ್, ತುಳು ಚಿತ್ರ ನಟ ಅರವಿಂದ್ ಬೋಳಾರ್ ಶುಭಾಂಶಯಗೈ ಯಲಿದ್ದಾರೆ.
ಕೇಶವ ಕೃಪಕ್ಕೆ ಭೇಟಿ:
ಕಾರ್ಕಳದಲ್ಲಿ 1950 ರಲ್ಲಿ ಆರಂಭ ಗೊಂಡ ಸುಪ್ರಸಿದ್ದ ಬಟ್ಟೆ ಮಳಿಗೆ ಪೂರ್ಣಿಮಾ ಕ್ಲಾತ್ ಶಾಪ್ ಹಾಗೂ ಕಾರ್ಕಳದಲ್ಲಿ ಪ್ರಪ್ರಥವಾಗಿ ಅರ್.ಎಸ್,ಎಸ್ ಶಾಖೆ ಆರಂಭಗೊಂಡ ಮನೆ “ಕೇಶವ ಕೃಪಾ” ಕ್ಕೆ ರಾಘವೇಂದ್ರ ಯಡಿಯೂರಪ್ಪ ಭೇಟಿ ನೀಡಿದರು. ಮಾಜಿ ಪ್ರಧಾನಿಳಾದ ಅಟಲ್ ಬಿಹಾರಿ ವಾಜಪೇಯಿ, ಚಂದ್ರಶೇಖರ್, ಮಾಜಿ ಕೇಂದ್ರ ಸಚಿವ ರುಗಳಾದ ಜಾರ್ಜ್ ಫರ್ನಾಂಡಿಸ್, ಸುಷ್ಮಾ ಸ್ವರಾಜ್, ಮಾಜಿ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಗಡೆ, ರಾಜ್ಯ ಸರ್ಕಾರದ ಗೃಹ ಸಚಿವ ಡಾ.ವಿ. ಎಸ್. ಆಚಾರ್ಯ ರವರು ಕಾರ್ಕಳಕ್ಕೆ ಭೇಟಿ ನೀಡಿದಾಗ ಅವರೆಲ್ಲರೂ ಇದೇ ಕೇಶವ ಕೃಪಾಕ್ಕೆ ಭೇಟಿ ನೀಡುತ್ತಿದ್ದ ಬಗ್ಗೆ ಸಂಸ್ಥೆಯ ಮಾಲಕ ರವಿಪ್ರಕಾಶ್ ಸವಿನೆನಪುಗಳನ್ನು ನೆನಪಿಸಿಕೊಂಡರು.
ಮಾರುತಿ ಗ್ಯಾಸ್ ಮಾಲಕ ನಿತ್ಯಾನಂದ ಪೈ, ಬೈಂದೂರಿನ ಉದ್ಯಮಿ ವೆಂಕಟೇಶ್ ಕಿಣಿ, ಪ್ರೈಮ್ ಮಾಲ್ನ ಪಾಲುದಾರರಾದ ಸಂಪತ್ ಜೈನ್, ಸಚಿನ್ ವಿ.ಸಾಲಿಯಾನ್ ಹಾಗೂ ಸಂಸ್ಥೆಯ ಮಾಲಕ ರವಿಪ್ರಕಾಶ್ ಪ್ರಭು ಮತ್ತು ಇನ್ನಿತರರು ಉಪಸ್ಥಿತರಿದ್ದರು.