ಕಾರ್ಕಳ: ಜ್ಞಾನಸುಧಾದ ಸುಕ್ಷಿತ್‌ಗೆ ರಾಷ್ಟ್ರಮಟ್ಟದಲ್ಲಿ 7ನೇ ರ‍್ಯಾಂಕ್

ಕಾರ್ಕಳ: ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ನಡೆಸಿದ ರಾಷ್ಟಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಕ್ಷಿತ್ ಪಿ.ಎಚ್ 100 ಪರ್ಸೆಂಟೈಲ್‌ನೊಂದಿಗೆ 7ನೇ ರ‍್ಯಾಂಕ್ ಗಳಿಸಿದ್ದಾರೆ.

ಇದೇ ವಿದ್ಯಾರ್ಥಿ ಕೆವಿಪಿವೈ (ಎಸ್‌ಎಕ್ಸ್)ನಲ್ಲಿ ಅರ್ಹತೆ ಪಡೆದಿದ್ದು, ನೀಟ್ ಪರೀಕ್ಷೆಯಲ್ಲಿ 685 ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ 640ನೇ ರ‍್ಯಾಂಕ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಮತ್ತು ರಿಸರ್ಚ್ (ಐಐಎಸ್‌ಇಆರ್) ಕಳೆದ ಸೆಪ್ಟೆಂಬರ್‌ನಲ್ಲಿ ನಡೆಸಿದ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಸಮಗ್ರ ವಿಭಾಗದಲ್ಲಿ 45ನೇ ರ‍್ಯಾಂಕ್, ಕೆಸಿಇಟಿಯಲ್ಲಿ ಬಿಎನ್‌ವೈಎಸ್ ಹಾಗೂ ವೆಟರ್ನರಿ ವಿಭಾಗದಲ್ಲಿ 43ನೇ, ಬಿ.ಎಸ್ಸಿ.ಅಗ್ರಿಯಲ್ಲಿ 68ನೇ, ಬಿ.ಫಾರ್ಮ ಮತ್ತು ಡಿ.ಫಾರ್ಮಾದಲ್ಲಿ 75ನೇ ರ‍್ಯಾಂಕ್ ಗಳಿಸಿದ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿ ಆಗಿದ್ದಾರೆ.

ಇವರ ಈ ಸಾಧನೆಯನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅವರು ಹಾಗೂ ಜ್ಞಾನಸುಧಾ ಬಳಗ ಅಭಿನಂದಿಸಿದೆ.