ಕಾರ್ಕಳ: ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೊಸ ಸೇವೆಗಳ ಆರಂಭ

ಕಾರ್ಕಳ: ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಹೊಸದಾಗಿ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗ, ಕಿವಿ ಮೂಗು ಗಂಟಲು ವಿಭಾಗ ಮತ್ತು ಸಾಮಾನ್ಯ ವಿಕಿರಣ ಶಾಸ್ತ್ರ ವಿಭಾಗಗಳನ್ನು ಆರಂಭಿಸಲಾಗಿದ್ದು, ಈ ಹೊಸ ಸೇವೆಗಳು ಹೊರ ರೋಗಿ ಮತ್ತು ಒಳ ರೋಗಿ ಸೇವೆಗಳನ್ನು ಒದಗಿಸಲಿವೆ.

ಸಾಮಾನ್ಯ ಶಸ್ತ್ರ ಚಿಕಿತ್ಸಕರಾಗಿ ಡಾ. ಪವನ್ ಎಂ ಭಟ್, ಕಿವಿ ಮೂಗು ಗಂಟಲು ತಜ್ಞರಾಗಿ ಡಾ. ಅನುಷಾ ಯಸ್ ಶೆಟ್ಟಿ ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ.

ವಿಕಿರಣ ಶಾಸ್ತ್ರ ತಜ್ಞರಾದ ಡಾ. ಅನಿತಾ ಯಸ್ ಪ್ರಭು ಸಾಮಾನ್ಯ ವಿಕಿರಣ ಶಾಸ್ತ್ರ ಸೇವೆಗಳಿಗೆ (ಜನರಲ್ ಅಲ್ಟ್ರಾಸೌಂಡ್ ಮತ್ತು ಡಾಪ್ಲರ್) ಪೂರ್ವ ನಿಗದಿಯೊಂದಿಗೆ(with appointment) ಲಭ್ಯವಿರುತ್ತಾರೆ” ಎಂದು ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ್ ತಿಳಿಸಿದ್ದಾರೆ.

ಹೊಸ ವಿಭಾಗಗಳ ಆರಂಭದ ಅಂಗವಾಗಿ ಫೆಬ್ರವರಿ 1ರಿಂದ 6ರ ವರೆಗೆ ಸಾಮಾನ್ಯ ಶಸ್ತ್ರ ಚಿಕಿತ್ಸೆ ಮತ್ತು ಮತ್ತು ಇಎನ್‌ಟಿ ವಿಭಾಗದಲ್ಲಿ ಉಚಿತ ಸಮಾಲೋಚನೆ ಸೌಲಭ್ಯವಿರುತ್ತದೆ. ಪ್ರಯೋಗಾಲಯ ಪರೀಕ್ಷೆ, ವಿಕಿರಣಶಾಸ್ತ್ರ ಪರೀಕ್ಷೆ (ಅಪಾಯಿಂಟ್ಮೆಂಟ್ ಆಧಾರದ ಮೇಲೆ), ಒಳ ರೋಗಿ / ಹೊರ ರೋಗಿಗಳ ಕಾರ್ಯವಿಧಾನಗಳಲ್ಲಿ (ಬಳಕೆಯಾಗುವ ವಸ್ತುಗಳನ್ನು ಹೊರತುಪಡಿಸಿ) ಶೇ. 20ರಷ್ಟು ರಿಯಾಯಿತಿ ಮತ್ತು ಔಷಧಗಳ ಮೇಲೆ ಶೇ. 10ರಷ್ಟು ವರೆಗೆ ರಿಯಾಯಿತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕಾರ್ಕಳದ ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯಲ್ಲಿ ಆರಂಭಿಸಿದ ಈ ಹೊಸ ಸೇವೆಗಳ ಪ್ರಯೋಜನವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಡಾ. ಬಲ್ಲಾಳ ಕೋರಿದ್ದಾರೆ.