ಕಾರ್ಕಳ: ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೊಸ ಸೇವೆಗಳ ಆರಂಭ

ಕಾರ್ಕಳ: ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಹೊಸದಾಗಿ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗ, ಕಿವಿ ಮೂಗು ಗಂಟಲು ವಿಭಾಗ ಮತ್ತು ಸಾಮಾನ್ಯ ವಿಕಿರಣ ಶಾಸ್ತ್ರ ವಿಭಾಗಗಳನ್ನು ಆರಂಭಿಸಲಾಗಿದ್ದು, ಈ ಹೊಸ ಸೇವೆಗಳು ಹೊರ ರೋಗಿ ಮತ್ತು ಒಳ ರೋಗಿ ಸೇವೆಗಳನ್ನು ಒದಗಿಸಲಿವೆ. ಸಾಮಾನ್ಯ ಶಸ್ತ್ರ ಚಿಕಿತ್ಸಕರಾಗಿ ಡಾ. ಪವನ್ ಎಂ ಭಟ್, ಕಿವಿ ಮೂಗು ಗಂಟಲು ತಜ್ಞರಾಗಿ ಡಾ. ಅನುಷಾ ಯಸ್ ಶೆಟ್ಟಿ ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ […]

ನರೆನ್ ಅಕಾಡೆಮಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ; ನೋಂದಣಿ ಆರಂಭ

ಉಡುಪಿ: ನರೆನ್ ಅಕಾಡೆಮಿ ಬ್ರಹ್ಮಾವರ ಇದರ ವತಿಯಿಂದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (ಎಸ್ಎಸ್ ಸಿ, ಐಬಿಪಿಎಸ್, ಆರ್ ಆರ್ ಬಿ, ಯುಪಿಎಸ್ ಸಿ, ಸಿ- ಸಿವಿಲ್ ಸರ್ವಿಸ್, ಎಫ್ ಡಿಎ ಹಾಗೂ ಇತರೆ ಪರೀಕ್ಷೆ) ಸಂಯೋಜಿತ (composite) ಆನ್ ಲೈನ್ ತರಬೇತಿ ಆಯೋಜಿಸಲಾಗಿದೆ. ವಿದ್ಯಾರ್ಹತೆ: ಬಿ.ಎ., ಬಿ.ಕಾಂ., ಬಿ.ಎಸ್ಸಿ, ಬಿಸಿಎ, ಬಿಬಿಎಂ ಪದವಿ ಹಂತದಲ್ಲಿರುವ ಹಾಗೂ ಈಗಾಗಲೇ ಪದವಿ ಪಡೆದಿರುವ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿರುವವರು ಈ ತರಬೇತಿಗೆ ಅರ್ಹರಾಗಿದ್ದಾರೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿವಿ ಅಂಗೀಕರಿಸಿದ […]

ಮಣಿಪಾಲ-ಮಂಗಳೂರು: ಜ. 30ರಿಂದ ವೋಲ್ವೋ ಸಾರಿಗೆ ಆರಂಭ

ಉಡುಪಿ: ಮಣಿಪಾಲದಿಂದ ಉಡುಪಿ, ಮಂಗಳೂರು, ಹಾಸನ ಮಾರ್ಗವಾಗಿ ಬೆಂಗಳೂರಿಗೆ ಹಗಲು ವೇಳೆಯಲ್ಲಿ ಕ್ಲಬ್ ಕ್ಲಾಸ್ ವೋಲ್ವೋ ಸಾರಿಗೆ ಸೌಲಭ್ಯವನ್ನು ಜನವರಿ 30ರಿಂದ ಆರಂಭಿಸಲಾಗುವುದು ಎಂದು ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಮಣಿಪಾಲದಿಂದ ಬೆಳಿಗ್ಗೆ 9.15 ಕ್ಕೆ ಹೊರಟು ಉಡುಪಿ, ಮಂಗಳೂರು, ಹಾಸನ ಮಾರ್ಗವಾಗಿ ಸಂಜೆ 6 ಗಂಟೆಗೆ ಬೆಂಗಳೂರು ತಲುಪಲಿದೆ. ಮರು ಪ್ರಯಾಣದಲ್ಲಿ ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಹೊರಟು ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಸಂಜೆ 4.30 ಕ್ಕೆ ಮಣಿಪಾಲ ತಲುಪಲಿದೆ. ನಿಗಮದ ವಾಹನಗಳಲ್ಲಿ […]

ಉಡುಪಿ: ಜ. 29ಕ್ಕೆ ಎಸ್ಸೆಸ್ಸೆಲ್ಸಿ ಕನ್ನಡ ವಿಷಯದ ಫೋನ್ ಇನ್ ಕಾರ್ಯಕ್ರಮ

ಉಡುಪಿ: ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಕ ಶೈಕ್ಷಣಿಕ ಗುಣಮಟ್ಟದ ಬಲವರ್ಧನೆಗಾಗಿ ಫೋನ್ ಇನ್ ಕಾರ್ಯಕ್ರಮ ನಡೆಸುತ್ತಿದ್ದು, ಅದರಂತೆ ಕಾರ್ಕಳದ ಬೈಲೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜನವರಿ 29ರಂದು ಸಂಜೆ 5ರಿಂದ ರಾತ್ರಿ 7 ಗಂಟೆಯವರೆಗೆ 10ನೇ ತರಗತಿಯ ಕನ್ನಡ ವಿಷಯಕ್ಕೆ ಸಂಬಂಧಿಸಿ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕನ್ನಡ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹಾಗೆ, […]

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಮತ್ತೆ ಎದೆನೋವು: ಆಸ್ಪತ್ರೆಗೆ ದಾಖಲು

ಕೋಲ್ಕತ್ತ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಮತ್ತೆ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹೃದಯಾಘಾತದ ಸೌಮ್ಯ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಗಂಗೂಲಿ ಅವರು ಬಳಿಕ ಗುಣಮುಖರಾಗಿ ಬಿಡುಗಡೆಯಾಗಿದ್ದರು. ಇದೀಗ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಸದ್ಯದ ಮಾಹಿತಿ ಪ್ರಕಾರ ಗಂಗೂಲಿ ಅವರು ಆರೋಗ್ಯವಾಗಿದ್ದಾರೆ. ಆದರೆ ಒಂದೆರಡು ದಿನ ಅವರು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.