ಕಾರ್ಕಳ: ಪೂರ್ಣಿಮಾ ಸಿಲ್ಕ್ಸ್ ಮುದ್ದುಕಂದ ಸ್ಪರ್ಧೆಯ ಬಹುಮಾನ ವಿತರಣೆ

ಕಾರ್ಕಳ: ರೋಟರಿ ಅನ್ಸ್ ಮತ್ತು ನಮ್ಮ ಕಾರ್ಲ ವಾಹಿನಿಯ ಆಶ್ರಯದಲ್ಲಿ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಮುದ್ದುಕಂದ ಸ್ಫರ್ಧೆಯ ಬಹುಮಾನ ವಿತರಣಾ ಸಮಾರಂಭವು ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ನ. 24ರಂದು ಜರಗಿತು.

ರಾಜಪುರ ಸಾರಸ್ವತ ಕ್ರೆಡಿಟ್ ಕೋ- ಅಪ್ ಸೊಸೈಟಿಯ ಅಧ್ಯಕ್ಷ ಕಡಾರಿ ರವಿಂದ್ರ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಬಿಜೆಪಿ ಯುವಮೊರ್ಚಾದ ಉಪಾಧ್ಯಕ್ಷ ಮುಟ್ಲುಪಾಡಿಯ ಸುಹಾಸ್ ಶೆಟ್ಟಿ ಮಾತನಾಡಿ, ಪೂರ್ಣಿಮಾ ಸಿಲ್ಕ್ಸ್ ಪಾಲುದಾರ ರವಿಪ್ರಕಾಶ್ ಪ್ರಭು ಲಾಭಾಂಶದ ಒಂದು ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಪೂರ್ಣಿಮಾ ಸಿಲ್ಕ್ಸ್ ಆಯೋಜಿಸಿದ್ದ ವೆಸ್ಟ್ರನ್ ಡ್ರೆಸ್ ಪೋಟೋ ಸ್ಪರ್ಧೆಯಲ್ಲಿ ವಿಜೇತರಾದ ಕಾರ್ಕಳದ ಭಕ್ತೀವರ್ದನ, ಉದ್ಯಾವರದ ದೀಕ್ಷಾ, ಹೆಬ್ರಿಯ ಸುಶ್ಮಾ ಅವರಿಗೆ ಬಹುಮಾನದೂಂದಿಗೆ ಗಿಫ್ಟ್ ವೋಚರ್ ನೀಡಲಾಯಿತು.

ಪೂರ್ಣಿಮಾ ಸಿಲ್ಕ್ಸ್ ರೂಪದರ್ಶಿಯರಾದ ಸುರಭಿ, ಪೂಜಾ, ಅಕ್ಷತಾ, ಅನೂಷ, ಸುರಕ್ಷಾ, ಮನಿಷಾ ಕಶ್ಯಪ್, ರಮ್ಯಾ, ಅನೂಲ ಅವರನ್ನು ಗೌರವಿಸಲಾಯಿತು.
ಮುಕ್ತಾ ವಾಹಿನಿಯ ನಿರೂಪಕಿ ಸೌಮ್ಯ ಕೋಟ್ಯಾನ್‍ ಅವರನ್ನು ಅಭಿನಂದಿಸಲಾಯಿತು.

ರೂಟರಿ ಅನ್ಸ್ ಅಧ್ಯಕ್ಷೆ ರಮಿತಾ ಶೈಲೆಂದ್ರ ರಾವ್ ಸ್ವಾಗತಿಸಿದರು. ಜೇಸಿಸ್ ರಾಷ್ಟೀಯ ತರಬೇತುದಾರ ರಾಜೇಂದ್ರ ಭಟ್ ವಂದಿಸುದರು. ಬಾಲ ಕಲಾವಿದೆ ಸೃಷ್ಠಿ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.