ಕಾರ್ಕಳ ಸಿವಿಲ್‌ ಇಂಜಿನಿಯರ್ಸ್ ಅಸೋಸಿಯೇಷನ್‌: ನೂತನ ಅಧ್ಯಕ್ಷರಾಗಿ ರಾಜೇಶ್‌ ಕುಂಟಾಡಿ ಆಯ್ಕೆ

ಕಾರ್ಕಳ: ಸಿವಿಲ್‌ ಇಂಜಿನಿಯರ್ಸ್ ಅಸೋಸಿಯೇಷನ್‌ ಕಾರ್ಕಳ ಇದರ ಅಧ್ಯಕ್ಷರಾಗಿ ರಾಜೇಶ್‌ ಕುಂಟಾಡಿ ಅವರು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಪ್ರಕಾಶ್‌ ಹೊಟೇಲ್‌ ಸಭಾಂಗಣದಲ್ಲಿ ನಡೆದ ಅಸೋಸಿಯೇಷನ್‌ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಇತರ ಪದಾಧಿಕಾರಿಗಳು: ಕಾರ್ಯದರ್ಶಿಯಾಗಿ ಮಂಜುನಾಥ ಹೆಗ್ಡೆ, ಉಪಾಧ್ಯಕ್ಷರಾಗಿ ಪ್ರಮಲ್‌ ಕುಮಾರ್‌, ಕೋಶಾಧಿಕಾರಿಯಾಗಿ ಪ್ರಕಾಶ್‌ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಅನೀಶ್‌ ತೆಂಡೂಲ್ಕರ್‌, ಸಾಂಸ್ಕೃತಿಕ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೇಯಸ್‌ ಶೆಟ್ಟಿ ಮತ್ತು ಸುಶಾಂತ್‌ ಶೆಟ್ಟಿ, ತಾಂತ್ರಿಕ ಕಾರ್ಯದರ್ಶಿಯಾಗಿ ಜಯರಾಜ್‌ ಶೆಟ್ಟಿ ಅವರು ನೇಮಕಗೊಂಡಿದ್ದಾರೆ.

ಗೌರವ ಸಲಹೆಗಾರರಾಗಿ ಶ್ರೀನಿವಾಸ್‌ ಜಿ.ಕೆ. ಪೈ, ಶಶಿಕಾಂತ್‌ ರೈ, ಅರುಣ್‌ ಕುಮಾರ್‌ ಶೆಟ್ಟಿ, ಎಚ್.‌ ರಾಜಣ್ಣ, ಎಂ.ಎಂ. ಹೆಗ್ಡೆ, ಕಾನೂನು ಸಲಹೆಗಾರಾಗಿ ಐ.ಆರ್.‌ ಬಳ್ಳಾಲ್‌, ಲೆಕ್ಕಪರಿಶೋಧಕರಾಗಿ ಪ್ರಭಾತ್‌ ಕುಮಾರ್‌ ಜೈನ್ ಅವರು ಆಯ್ಕೆಯಾಗಿದ್ದಾರೆ.