ಕಾರ್ಕಳ :ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಶಾಲಾ ಕಾಲೇಜುಗಳನ್ನು ನಡೆಸಬಾರದು ಎನ್ನುವ ನಿಯಮವಿದ್ರೂ ಕಾರ್ಕಳದ ಬೋರ್ಡ್ ಹೈಸ್ಕೂಲ್ ನ ಮುಖ್ಯ ಶಿಕ್ಷಕ ರಾಜಾರೋಷವಾಗಿ ತರಗತಿ ನಡೆಸಿದ್ದಾರೆ.ತನ್ನ ವ್ಯಾಪ್ತಿಯ ಸರಕಾರಿ ಶಾಲೆಯೊಂದರಲ್ಲಿ ಹೀಗೆ ಏಕಾಏಕಿ ತರಗತಿ ನಡೆಯುತ್ತಿದ್ದರೂ ಇಲ್ಲಿನ ತಾಲೂಕು ಶಿಕ್ಷಣಾಧಿಕಾರಿಗೆ ಈ ವಿಷಯವೇ ಗೊತ್ತಿಲ್ಲ. ಇದೀಗ ಈ ಘಟನೆ ಸಾರ್ವಜನಿಕವಾಗುತ್ತಿದ್ದಂತೆಯೇ ಮುಖ್ಯ ಶಿಕ್ಷಕ ಮುರಳಿ ಪ್ರಭು ಮತ್ತು ತಾಲೂಕು ಶಿಕ್ಷಣಾಧಿಕಾರಿ ಶಶಿಧರ್ ಜಿ ಎಸ್ ಪರಸ್ಪರ ದೂಷಣೆಯಲ್ಲಿ ತೊಡಗಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಶುಕ್ರವಾರ ಮುಖ್ಯೋಪಾಧ್ಯಾಯರು ,ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಏಕಾಏಕಿ ತರಗತಿಗೆ ಹಾಜರಾಗುವಂತೆ ಸೂಚನೆ ನೀಡಿದ್ದು ದೂರದೂರಿನ ವಿದ್ಯಾರ್ಥಿಗಳು ಪಡಬಾರದ ಪಾಡು ಪಟ್ಟು ತರಗತಿಗಳಿಗೆ ಹಾಜರಾಗಿದ್ದಾರೆ.
ಶಿಕ್ಷಣಾಧಿಕಾರಿ ಹೇಳಿದ್ರು ಅದರಂತೆ ಮಾಡಿದೆ:
ವಿದ್ಯಾರ್ಥಿಗಳಿಗೆ ಆದ ತೊಂದರೆ ಬಗ್ಗೆ ಮುಖ್ಯೋಪಾಧ್ಯಾಯರನ್ನು ವಿಚಾರಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಜಿಎಸ್ ಶಶಿಧರ್ ಸೂಚನೆಯಂತೆ ತರಗತಿಗಳನ್ನು ನಡೆಸಲಾಗಿದೆ. ಅವರು ಹೇಳಿದಂತೆ ನಡೆದುಕೊಂಡಿದ್ದೇನೆ ಎಂದು ಹೇಳಿದರೆ ಶಿಕ್ಷಣಾಧಿಕಾರಿ ನನಗೆ ವಿಷಯವೇ ಗೊತ್ತಿಲ್ಲ ಎಂದು ಜಾರಿಕೊಂಡಿದ್ದಾರೆ.
ಕಾರ್ಕಳ ತಾಲೂಕಿನ ಈ ಭಾಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲು ಖಾಸಗಿ ಸಾರಿಗೆ ಸಂಸ್ಥೆಗಳನ್ನೇ ಅವಲಂಬಿಸಿದ್ದು, ಇನ್ನು ಕೂಡು ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯದ ಹಿನ್ನಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಕಿಮೀ ಗಟ್ಟಲೇ ದೂರದಿಂದ ನಡೆದುಕೊಂಡು ಬಂದರೆ. ಮತ್ತೆ ಕೆಲವರು ಸರಕು ಸಾಗಿಸು ಗೂಡ್ ವಾಹನಗಳಲ್ಲಿ ಶಾಲೆಗೆ ಬಂದು ತರಗತಿಗೆ ಹಾಜರಾಗಿದ್ದಾರೆ. ಇದರಿಂದಾಗಿ ಸಾಮಾಜಿಕ ಅಂತರ ಪಾಲಿಸುವ ಜವಾಬ್ದಾರಿ ಮರೆತು ಕೆಲವೊಂದು ಪೋಷಕರು ಒಂದೇ ಬೈಕ್ ನಲ್ಲಿ ಮೂರು ನಾಲ್ಕು ಮಕ್ಕಳನ್ನು ಕೂರಿಸಿ ಕೊಂಡು ಶಾಲೆಗೆ ಬಿಟ್ಟ ಪ್ರಸಂಗ ನಡೆದಿದೆ.
ರಾಜ್ಯದ್ಯಾಂತ ಲಾಕ್ ಡೌನ್ ಮತ್ತು ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಇನ್ನು ಕೂಡ ರಾಜ್ಯ ಶಿಕ್ಷಣ ಇಲಾಖೆ ಅನುಮತಿ ನೀಡಿಲ್ಲ,ಆದರೆ ಕಾರ್ಕಳದ ಈ ಶಾಲೆಗೆ ಮಾತ್ರ ತರಗತಿ ನಡೆಸಲು ಅದ್ಯಾರು ಅನುಮತಿ ನೀಡಿದರು ಎನ್ನುವ ಪ್ರಶ್ನೆ ಉದ್ಬವಿಸಿದೆ. ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಮತ್ತು ಮುಖ್ಯೋಪಾದ್ಯಾಯರು ತಮ್ಮದೇ ಹೊಸ ನಿಯಮವೇನಾದರೂ ಮಾಡಿಕೊಂಡಿದ್ದಾರೆಯೇ ಎಂದು ಜನ ಕೇಳುತ್ತಿದ್ದಾರೆ.
ಲಾಕ್ ಡೌನ್ ನಿಂದ ಮೊದಲೇ ತಾಲೂಕಿನಲ್ಲಿ ಬಸ್ಸುಗಳ ಓಡಾಟವಿಲ್ಲ ಅಂತದ್ದರಲ್ಲಿ ದೂರದೂರಿನ ವಿದ್ಯಾರ್ಥಿಗಳನ್ನು ಹೇಗಾದರೂ ಶಾಲೆಗೆ ಬರಹೇಳಿ ತರಗತಿ ನಡೆಸಿದ್ದು ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ತಾಲೂಕಿನಲ್ಲಿ ಸಮಸ್ತ ಶಿಕ್ಷಣದ ಜವಾಬ್ದಾರಿ ಹೊರಬೇಕಾಗಿದ್ದ ಶಿಕ್ಷಣಾಧಿಕಾರಿಗಳು ಇಂತಹ ಬೇಕಾಬಿಟ್ಟಿ ವರ್ತನೆಗೆ ಅನುವು ಮಾಡಿ ಕೊಟ್ಟಿದ್ದಾರೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯ ಅದೇಶವನ್ನು ದಿಕ್ಕರಿಸಲಾಗದೆ ಶಾಲೆಗೆ ಬಂದಿದ್ದರೂ ಪಾಠ ಮಾಡವುದಕ್ಕೆ ಶಿಕ್ಷಕರೊಬ್ಬರೇ ಹಾಜರಾಗಿರುವುದು ನೋಡಿದರೆ ತರಗತಿ ನಡೆಸುವುದು ವಿಚಾರದಲ್ಲಿ ಮುಖ್ಯೋಪಾಧ್ಯಾಯ ಮೇಲೆ ಒತ್ತಡ ಇರುವುದು ಸ್ಪಷ್ವಾಗಿದೆ.
ಜಿಲ್ಲಾಧಿಕಾರಿ ಅದೇಶದಂತೆ ಮಕ್ಕಳನ್ನು ತರಗತಿಗೆ ಕರೆಸಿಕೊಳ್ಳದಂತೆ ನಾವು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದೇವೆ. ಕರೆಸಿ ಕೊಂಡು ಏನಾದ್ರು ಸಮಸ್ಯೆ ಅದ್ರೆ ಅದಕ್ಕೆ ನೇರ ಹೊಣೆ ಮುಖ್ಯೋಪಾಧ್ಯಾಯರೇ ಆಗಿರುತ್ತಾರೆ ಎಂದು ಶಿಕ್ಷಣಾಧಿಕಾರಿ ಶಶಿಧರ್ ನೇರವಾಗಿ ಶಿಕ್ಷಕರ ಮೇಲೆ ಆರೋಪಿಸಿದರೆ ಶಿಕ್ಷಕರು ಶಿಕ್ಷಣಾಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ.