ಕಾರ್ಕಳ: ಇಂದಿನಿಂದ ಅತ್ತೂರು ಸಾಂತ್ ಮಾರಿ ಜಾತ್ರೆ ಆರಂಭ

ಕಾರ್ಕಳ: ಇತಿಹಾಸ ಪ್ರಸಿದ್ದ ಅತ್ತೂರು ಸಂತ ಲಾರೆನ್ಸರ ಬಸಿಲಿಕಾದ ಸಾಂತ್ ಮಾರಿ ಜಾತ್ರೆಯು ಇಂದಿನಿಂದ (ಜ. 18) ರಿಂದ 28ರ ವರೆಗೆ ಕೋವಿಡ್ ಮಾರ್ಗಸೂಚಿಯಂತೆ ನೆರವೇರಲಿದೆ.

ಭಾನುವಾರ ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ನಡೆಯಿತು. ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು. ಧರ್ಮಗುರು ಜಾಜ್ ಡಿಸೋಜಾ ಪ್ರಾರ್ಥನೆ ನೆರವೇರಿಸಿದರು. ಜಿಪಂ ಸದಸ್ಯೆ ರೇಷ್ಮಾ ಶೆಟ್ಟಿ, ತಾಪಂ ಸದಸ್ಯ ಹರಿಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ಸ್ವಾಗತಿಸಿದರು. ಕಾರ್ಯದರ್ಶಿ ಬೆನೆಡಿಕ್ಟಾ ನೊರೊನ್ಹಾ ವಂದಿಸಿದರು.

ಪ್ರತಿ ವರ್ಷ ಐದು ದಿನಗಳಲ್ಲಿ 50 ಬಲಿ ಪೂಜೆಗಳು ನಡೆಯುತ್ತಿದ್ದವು. ಲಕ್ಷಾಂತರ ಮಂದಿ ಸೇರುತ್ತಿದ್ದರು. ಆದರೆ ಈ ಬಾರಿ ಜನಸಂದಣಿ ತಪ್ಪಿಸುವ ನಿಟ್ಟಿನಲ್ಲಿ 11 ದಿನಗಳಲ್ಲಿ 55 ಪೂಜೆ ನಡೆಸಲು ತೀರ್ಮಾನಿಸಲಾಗಿದೆ. ಜ. 18ರಿಂದ 24ರ ವರೆಗೆ ಕೊಂಕಣಿಯಲ್ಲಿ ಬಲಿಪೂಜೆ ನಡೆಯಲಿದೆ. ಜ. 25ರಿಂದ 28ರ ವರೆಗೆ ಕೊಂಕಣಿ ಮತ್ತು ಕನ್ನಡ ಭಾಷೆಗಳಲ್ಲಿ ಬಲಿಪೂಜೆ ನಡೆಯಲಿದೆ.