ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ ಸಹ ಪ್ರಾಧ್ಯಾಪಕ ಅನಂತಕೃಷ್ಣ ಸೋಮಯಾಜಿ ಅವರು ಹೊನ್ನು (ಅಲ್ಯುಮಿನಿಯಂ) ನಾರುಗಳಿಂದ ಬಲಪಡಿಸಲ್ಪಟ್ಟ ಲೋಹ ಗರ್ಭಿಕೃತ ಸಮ್ಮಿಶ್ರ ವಸ್ತುವಿನ ಪ್ರಾಯೋಗಿಕ ಮತ್ತು ಪರಿಮಿತ ಅಂಶಗಳ ಅಧ್ಯಯನ ಎಂಬ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ. ನರಸಿಂಹ ಮರಕಾಲ ಅವರ ಮಾರ್ಗದರ್ಶನದಲ್ಲಿ ಸೋಮಯಾಜಿ ಈ ಪ್ರಬಂಧ ಮಂಡಿಸಿದ್ದರು.
ಎ.ಕೆ. ಸೋಮಯಾಜಿಯವರು ಕುಂದಾಪುರ ತಾಲೂಕು ಕೊಡ್ಲಾಡಿ ಗ್ರಾಮದ ನಿವೃತ್ತ ಕನ್ನಡ ಪಂಡಿತರಾದ ಎಂ. ಮಹಾಬಲೇಶ್ವರ ಸೋಮಯಾಜಿ ಮತ್ತು ವಾಗ್ದೇವಿಯವರ ಮಗ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬೆಳ್ಳಾಲ ಗ್ರಾಮದ ಮೋರ್ಟ್ ಮೂಲದ “ಸೋಮಯಾಜಿ ಮನೆತನ”ದವರಾದ ಅವರು ಪ್ರಸ್ತುತ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಕಾಸಾನುಗುಂದುವಿನಲ್ಲಿ ನೆಲೆಸಿದ್ದಾರೆ..