ಕಾರ್ಕಳ: ಅರ್ಧದಲ್ಲಿ ಸ್ಥಗಿತಗೊಂಡಿದ್ದ ಬಡ ಕುಟುಂಬದ ಮನೆಯನ್ನು ಪೂರ್ಣಗೊಳಿಸಿದ ಕರಾವಳಿ ಯೂತ್ ಕ್ಲಬ್

ಕಾರ್ಕಳ: ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಅಶಕ್ತ ಕುಟುಂಬದ ನಿವಾಸಿ ದಿ. ಮಮತಾ ನಾಯ್ಕ ಅವರು ಆರ್ಥಿಕ ಹೊರೆಯಿಂದ ಅರ್ಧದಲ್ಲೇ ನಿಲ್ಲಿಸಿದ ಮನೆಯನ್ನು ಕರಾವಳಿ ಯೂತ್ ಕ್ಲಬ್ (ಕೆವೈಸಿ) ಉಡುಪಿ ಸಂಸ್ಥೆಯ ವತಿಯಿಂದ ತುರ್ತು ಯೋಜನೆಯ ಸಹೃದಯಿ ದಾನಿಗಳ ಸಹಕಾರದಿಂದ ಮನೆಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಇಂದು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ದಾನಿಗಳ ನೆರವಿನಿಂದ ಒಟ್ಟಾದ ಮೊತ್ತದಲ್ಲಿ ಮನೆಯ ಕೆಲಸ ಆಗಿ ಉಳಿದ 47,000 ಮೊತ್ತದ ಚೆಕ್ ನ್ನು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮತ್ತು ಮನೆಯ ಖರ್ಚು ವೆಚ್ಚಕ್ಕಾಗಿ ಹಿರಿಯರ ಸಮ್ಮುಖದಲ್ಲಿ ನೀಡಲಾಯಿತು.

ಈ ಕಾರ್ಯದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲ ಸಹೃದಯಿ ಬಂಧುಗಳಿಗೂ ಕರಾವಳಿ ಯೂತ್ ಕ್ಲಬ್ ಕೃತಜ್ಞತೆ ಸಲ್ಲಿಸಿದೆ.