ಕಾರ್ಕಳ: ಬಾಗಿಲಿನ ಬೀಗ ಮುರಿದು ₹15.40 ಲಕ್ಷ ಮೌಲ್ಯದ ಚಿನ್ನಾಭರಣ, ₹ 60 ಸಾವಿರ ನಗದು ಕಳವು

ಕಾರ್ಕಳ: ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಬೀರುವಿನಲ್ಲಿದ್ದ 15.40 ಲಕ್ಷ ಮೌಲ್ಯದ ಸುಮಾರು 55 ಪವನ್ ಚಿನ್ನಾಭರಣ, ₹60 ಸಾವಿರ ನಗದು ಕಳವು ಮಾಡಿದ ಘಟನೆ ಕುಕ್ಕುಂದೂರು ಅಯ್ಯಪ್ಪನಗರದ ಸಂದೀಪ್ ಜೈನ್ ಎಂಬುವವರ ಮನೆಯಲ್ಲಿ ನಡೆದಿದೆ.

ಮನೆಯವರೆಲ್ಲ ಕುಟುಂಬದ ದೈವದ ಕೋಲಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕೈಚಳಕ ತೋರಿದ ಕಳ್ಳರು ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲವೆಂಬ ಮಾಹಿತಿ ತಿಳಿದವರೇ ಈ ಕೃತ್ಯವನ್ನು ನಡೆಸಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ, ಕಳ್ಳತನಕ್ಕೆ ಬಳಸಿದ್ದ ಕೀಬಂಚ್ ಅನ್ನು ಮನೆಯಲ್ಲೇ ಬಿಟ್ಟುಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.