ಕರಾವಳಿಯ ಪುಣ್ಯಕ್ಷೇತ್ರಗಳಿಗೆ ನಟ‌‌ ದರ್ಶನ್‌‌ ಭೇಟಿ

ಮಂಗಳೂರು, ಜೂ. 28: ಕರಾವಳಿಯ ಪುಣ್ಯಕ್ಷೇತ್ರಗಳಿಗೆ ಶುಕ್ರವಾರ ಚಿತ್ರನಟ ದರ್ಶನ್ ಭೇಟಿ ನೀಡಿದ್ದಾರೆ.
ಧರ್ಮಸ್ಥಳ, ಪುತ್ತೂರು ಮಹಾಲಿಂಗೇಶ್ವರ, ಸೌತಡ್ಕ ಗಣಪತಿ ಕ್ಷೇತ್ರಗಳಿಗೆ ಭೇಟಿ ನೀಡಿ ದರ್ಶನ ಮಾಡಿದ್ದಾರೆ.
ಪುತ್ತೂರಿನ ಸ್ನೇಹಿತರ ಗೃಹ ಪ್ರವೇಶಕ್ಕೆ ಆಗಮಿಸಿದ್ದ ದರ್ಶನ್, ಗೃಹಪ್ರವೇಶದ ಬಳಿಕ ದೇವಸ್ಥಾನಗಳಿಗೆ ತೆರಳಿದರು.