ಕರಾವಳಿಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಭ್ ಶೆಟ್ಟಿಯವರು ಇದೆ ಮೊದಲ ಬಾರಿಗೆ ಸಕುಟುಂಬ ಸಮೇತರಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ, ಮಗ ರನ್ವಿತ್ ಶೆಟ್ಟಿ ಮತ್ತು ಮಗಳು ರಾಧ್ಯ ಶೆಟ್ಟಿ ಜೊತೆ ಇರುವ ತಮ್ಮ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ರಿಷಭ್ ಶೆಟ್ಟಿ ಅವರ ಪರಿವಾರವನ್ನು ಕಂಡ ನೆಟ್ಟಿಗರು ಸಂತೋಷ ವ್ಯಕ್ತ ಪಡಿಸಿ ಕಾಂತಾರ ಯಶಸ್ಸಿಗಾಗಿ ಶುಭಹಾರೈಸಿದ್ದಾರೆ. ಇದಕ್ಕೂ ಕೆಲದಿನಗಳ ಮುನ್ನ ತಮ್ಮ ಮಗಳು ರಾಧ್ಯ ಜೊತೆ ಇರುವ ಮುದ್ದಾದ ಚಿತ್ರವನ್ನು ರಿಷಭ್ ಹಂಚಿಕೊಂಡಿದ್ದರು.
ಕಾಂತಾರ ಯಶಸ್ಸಿನ ಬಳಿಕ 2 ತಿಂಗಳ ಕಾಲ ರಜಾ ತೆಗೆದುಕೊಂಡು ತಮ್ಮ ಕುಟುಂಬದ ಜೊತೆ ಸಮಯ ಕಳೆಯುವ ವಿಚಾರವನ್ನು ಅದಾಗಲೇ ಹಲವಾರು ಸಂದರ್ಶನಗಳಲ್ಲಿ ರಿಷಭ್ ಹೇಳಿದ್ದಾರೆ. ಅದರಂತೆ ತಮ್ಮ ಕುಟುಂಬದ ಜೊತೆ ಇರುವ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ತಮ್ಮ ಸಂತಸದಲ್ಲಿ ಪಾಲುದಾರರನ್ನಾಗಿಸಿದ್ದಾರೆ.