ಸ್ವತಂತ್ರ ಭಾರತದ ಪ್ರಥಮ ಮತದಾರ ಶ್ಯಾಮ್ ಸರನ್ ನೇಗಿ 106 ನೇ ವಯಸ್ಸಿನಲ್ಲಿ ನಿಧನ

ನವದೆಹಲಿ: ಸ್ವತಂತ್ರ ಭಾರತದ ಪ್ರಥಮ ಮತದಾರ ಶ್ಯಾಮ್ ಸರನ್ ನೇಗಿ ಶನಿವಾರ ಬೆಳಿಗ್ಗೆ ತಮ್ಮ 106 ನೇ ವಯಸ್ಸಿನಲ್ಲಿ ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ದೇಶದ ಮೊದಲ ಚುನಾವಣೆಯಿಂದ ಪ್ರಸಕ್ತ ಚುನಾವಣೆವರೆಗೆ ಎಲ್ಲ ಚುನಾವಣೆಗಳಲ್ಲೂ ನೇಗಿ ಮತ ಚಲಾಯಿಸಿದ್ದಾರೆ. 106 ನೇ ವಯಸ್ಸಿನಲ್ಲಿಯೂ ಅವರು ಮತ ಚಲಾಯಿಸುವುದನ್ನು ಬಿಟ್ಟಿರಲಿಲ್ಲ. ನವೆಂಬರ್ 2 ರಂದು 34 ನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಅಂಚೆ ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಶ್ಯಾಮ್ ಸರಣ್ ನೇಗಿ ಅವರು […]

ಸುರತ್ಕಲ್ ಟೋಲ್ ಗೇಟ್ ವಿರುದ್ದದ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ

ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ಜನತೆಯನ್ನು ಸುಲಿಗೆ ಮಾಡಿ ಹಗಲು ದರೋಡೆ ಮಾಡುತ್ತಿದೆ. ಈ ಟೋಲ್ ಗೇಟ್ ಅನಧಿಕೃತವೆಂದು ಸರಕಾರವೇ ಒಪ್ಪಿಕೊಂಡಿದ್ದರೂ, ಇನ್ನೂ ತೆರವು ಮಾಡದಿರುವುದು ಜಿಲ್ಲೆಯ ಜನತೆಗೆ ಬಗೆದ ದ್ರೋಹ. ಕಾರ್ಕಳದ ಜನರೂ ಇದರಿಂದ ಸಂತ್ರಸ್ತರಾಗಿದ್ದಾರೆ. ಆದ್ದರಿಂದ ಅಕ್ರಮವಾಗಿ ಸುಲಿಗೆ ಮಾಡುತ್ತಿರುವ ಸುರತ್ಕಲ್ ಟೋಲ್ ಗೇಟ್ ಕೂಡಲೇ ಬಂದ್ ಆಗಬೇಕು. ಟೋಲ್ ನ ವಿರುದ್ಧ ನಡೆಯುವ ಯಾವುದೇ ಹೋರಾಟಕ್ಕೂ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕೆ.ಪಿ.ಸಿ.ಸಿ ಸದಸ್ಯ ಸುರೇಂದ್ರ ಶೆಟ್ಟಿ ಹೇಳಿದರು. ಅವರು ಶನಿವಾರದಂದು ಸುರತ್ಕಲ್ […]

ಮೋರ್ಬಿ ಸೇತುವೆ ದುರಂತ: ಸೇತುವೆ ದುರಸ್ತಿಗೆ ಮಂಜೂರಾದ 2 ಕೋಟಿ ರೂ.ಗಳಲ್ಲಿ ಕೇವಲ 12 ಲಕ್ಷ ರೂ ಖರ್ಚು ಮಾಡಿದ ಒರೆವಾ

ಮೋರ್ಬಿ: 130 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮೋರ್ಬಿ ತೂಗು ಸೇತುವೆ ದುರಂತದ ತನಿಖೆಯಲ್ಲಿ ಸೇತುವೆಯ ನವೀಕರಣದ ಜವಾಬ್ದಾರಿ ಹೊತ್ತ ಒರೆವಾ ಕಂಪನಿಯು ಮಂಜೂರಾದ 2 ಕೋಟಿ ರೂ.ಗಳಲ್ಲಿ ಕೇವಲ 12 ಲಕ್ಷ ರೂಗಳನ್ನು ಮಾತ್ರ ಖರ್ಚುಮಾಡಿದೆ ಎಂದು ಬಹಿರಂಗವಾಗಿದೆ. ಕಂಪನಿಯು ನವೀಕರಣದ ಗುತ್ತಿಗೆಯನ್ನು ಹೇಗೆ ಪಡೆದುಕೊಂಡಿದೆ ಮತ್ತು ಬ್ರಿಟಿಷರ ಕಾಲದ ಸೇತುವೆಯನ್ನು ಬಲಪಡಿಸಲು ಮಂಜೂರಾದ ಹಣದಲ್ಲಿ ಕೇವಲ ಒಂದು ಭಾಗವನ್ನು ಹೇಗೆ ಖರ್ಚು ಮಾಡಿದೆ ಎನ್ನುವುದನ್ನು ಪೊಲೀಸ್ ತನಿಖೆಯು ಬಹಿರಂಗಪಡಿಸಿದೆ. ಅಜಂತಾದ ಅಂಗಸಂಸ್ಥೆಯಾಗಿರುವ ಅಹಮದಾಬಾದ್ […]

ವಕೀಲರ ಮನೆಯಲ್ಲಿ ಕಳ್ಳತನ ಪ್ರಕರಣ: ಆರೋಪಿಗೆ ಕಾರಾಗೃಹವಾಸ ಶಿಕ್ಷೆ ವಿಧಿಸಿದ ಜಿಲ್ಲಾ ನ್ಯಾಯಾಲಯ

ಉಡುಪಿ: ವಕೀಲರೊಬ್ಬರ ಮನೆಯಲ್ಲಿ ಕಳ್ಳತನ ನಡೆಸಿದ ಆರೋಪಿಗೆ ನಗರದ ಪ್ರಧಾನ ಹಿರಿಯ ಸಿಜೆ ಮತ್ತು ಸಿ.ಜೆ.ಎಂ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ. ಫೆ.23 ರಂದು ಫಿಲಿಪ್ ಪಿ.ಥೋಮಸ್ ಎಂಬಾತನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಯುಬಿಎಂಸಿ ಜುಬಿಲಿ ಚರ್ಚ್ ಬಳಿಯಿರುವ ವಕೀಲ ನೋವೆಲ್ ಪ್ರಶಾಂತ್ ಕರ್ಕಡ ಇವರ ಮನೆಗೆ ನುಗ್ಗಿ, ಮೊಬೈಲ್ ಮತ್ತು ಲ್ಯಾಪ್ ಟಾಪ್ ಕಳವು ಮಾಡಿದ್ದು, ನಗರ ಠಾಣೆ ಉಪನಿರೀಕ್ಷಕರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ […]

ಮಲ್ಪೆ: ಶ್ರೀರಾಮ ಮಂದಿರದಲ್ಲಿ ವಿಶ್ವರೂಪ ದರ್ಶನ

ಮಲ್ಪೆ: ಕಾರ್ತಿಕ ಮಾಸದ ಏಕಾದಶಿ ಅಂಗವಾಗಿ ಮಲ್ಪೆ ಶ್ರೀ ರಾಮಮಂದಿರದಲ್ಲಿ ಜಿ ಎಸ್ ಬಿ ಸಮಾಜ ಯುವಕ ಮತ್ತು ಮಹಿಳಾ ಮಂಡಳಿಯ ಆಶ್ರಯದಲ್ಲಿ ಗುರುವಾರದಂದು ಭಜನಾ ಕಾರ್ಯಕ್ರಮ ಹಾಗೂ ರಾತ್ರಿ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವರೂಪ ದರ್ಶನ ನೆರವೇರಿತು. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಶ್ರೀರಾಮ ದರ್ಶನ, ವೀರ ವಿಠಲ, ರಂಗೋಲಿಯ ಚಿತ್ತಾರ, ಹೂಗಳಿಂದ ರಚಿಸಿದ ರಂಗೋಲಿ , ಹಣತೆಯ ದೀಪದಿಂದ ಓಂ , ಸ್ವಸ್ತಿಕ್, ಶಂಖ ಚಕ್ರ ಗಳನ್ನು ರಚಿಸಲಾಗಿತ್ತು. ಭಕ್ತರು […]