ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬ್ರಹ್ಮಾವರ: ತನು ಕನ್ನಡ ಮನ ಕನ್ನಡ ಎಂಬ ಕವಿ ವಾಣಿಯಂತೆ ಕನ್ನಡದ ಕುರಿತು ಅಭಿಮಾನವನ್ನು ಹೊಂದಿರುವ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ವಿದ್ಯಾರ್ಥಿಗಳಿಗೆ ಕನ್ನಡ ಸಮೂಹ ಗೀತೆ, ಕನ್ನಡ ಭಾಷಣ ನಡೆಸಲಾಯಿತು.

ಕಾಲೇಜಿನ ಸಂಸ್ಥಾಪಕ ಸುಬ್ರಹ್ಮಣ್ಯ ಹಾಗೂ ಕಾಲೇಜಿನ ನಿರ್ದೇಶಕಿ ಮಮತಾ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಪ್ರಾಂಶುಪಾಲೆ ಡಾ. ಸೀಮಾ ಜಿ ಭಟ್ , ಉಪ ಪ್ರಾಂಶುಪಾಲೆ ಸುಜಾತ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ ರಾಝಿಕಾ, ಕನ್ನಡ ಉಪನ್ಯಾಸಕ ನವೀನ್ ಕುಮಾರ್ , ಹಿಂದಿ ಉಪನ್ಯಾಸಕ ಉದಯ್ ಕುಮಾರ್ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥೆ ಉಪನ್ಯಾಸಕಿ ಅನುಪಮ ಪಿ ಭಟ್ ನಿರೂಪಿಸಿದರು.