ಎಲೆಕ್ಟ್ರಿಕ್, ಸಿಎನ್‌ಜಿ, ಬಿಎಸ್‌-VIಗೆ ಮಾತ್ರ ಅನುಮತಿ : ದೆಹಲಿಯಲ್ಲಿ ಹಳೆಯ ಬಸ್‌ಗಳಿಗಿಲ್ಲ ಅವಕಾಶ

ನವದೆಹಲಿ: ಸರ್ಕಾರದ ನಿರ್ದೇಶನದಂತೆ ಇಂದಿನಿಂದ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಹಳೆಯ ಡೀಸೆಲ್ ಬಸ್‌ಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.ವಾಯುಮಾಲಿನ್ಯ ನಿಯಂತ್ರಿಸುವ ಸಲುವಾಗಿ ದೆಹಲಿ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ.ರಾಷ್ಟ್ರ ರಾಜದಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ತೀರಾ ಕಳಪೆಯಾಗಿದೆ. ವಾಯು ಗುಣಮಟ್ಟ ನಿರ್ವಹಣಾ ಸಮಿತಿಯು ನಗರಕ್ಕೆ ಬರುವ ರಾಸಾಯನಿಕಸಮೇತ ಹೊಗೆ ಸೂಸುವ ಬಸ್​​ಗಳಿಗೆ ಇದೀಗ ನಿರ್ಬಂಧ ಹೇರಿದೆ. ಸಾರಿಗೆ ಇಲಾಖೆಯ ಪ್ರಕಾರ, ಮುಂದಿನ ವರ್ಷ ಜುಲೈ 1 ರಿಂದ ಯಾವುದೇ ನಗರದಿಂದ ದೆಹಲಿಗೆ ಬರುವ ಎಲ್ಲಾ […]

ಅಭಿಮಾನಿಗಳಿಗೆ ದರ್ಶನ್ ಮನವಿ: ಗರಡಿ ಸಿನಿಮಾ ನೋಡಿ ನಮ್ಮಂಥ ಕಲಾವಿದರಿಗೆ ಅನ್ನದಾತರಾಗಬೇಕು

ಯೋಗರಾಜ್ ಭಟ್ ನಿರ್ದೇಶನ, ಕೌರವ ಖ್ಯಾತಿಯ ಬಿ.ಸಿ ಪಾಟೀಲ್ ಹಾಗೂ ಸೂರ್ಯ ಅಭಿನಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಗರಡಿ ಚಿತ್ರದ ಟ್ರೈಲರ್​ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು‌.ಹಾವೇರಿಯ ರಾಣೆಬೆನ್ನೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಗರಡಿ ಚಿತ್ರದ ಟ್ರೈಲರ್​ನ್ನು ನಟ ದರ್ಶನ್ ಬಿಡುಗಡೆ ಮಾಡಿದರು‌. ಹಾವೇರಿಯ ರಾಣೆಬೆನ್ನೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು. ಟ್ರೈಲರ್ ಬಿಡುಗಡೆ ಬಳಿಕ ಮಾಡಿದ ಮಾತನಾಡಿದ ನಟ ದರ್ಶನ್, ”ಮೊದಲಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಹೇಳುತ್ತ, ನಾನು ರಾಣೇಬೆನ್ನೂರಿಗೆ ಬಂದು 9 ವರ್ಷ ಆಯ್ತು. ರಾಣೇಬೆನ್ನೂರು […]

ಪತ್ರಕರ್ತರ ಹತ್ಯೆ: 30 ವರ್ಷದಲ್ಲಿ ವಿಶ್ವದಾದ್ಯಂತ 1,600ಕ್ಕೂ ಅಧಿಕ ಜನ ಹತ್ಯೆ

ಹೈದರಾಬಾದ್: ವಿಶ್ವಸಂಸ್ಥೆಯ ಮಾಹಿತಿ ಪ್ರಕಾರ, ಹತ್ತರ ಪೈಕಿ ಒಂಬತ್ತು ಪತ್ರಕರ್ತರ ಹತ್ಯೆ ಪ್ರಕರಣ ಬಗೆಹರಿದಿಲ್ಲ. ಪತ್ರಕರ್ತರ ಹತ್ಯೆ ಅಸ್ಪಷ್ಟವಾಗಿ ಉಳಿಯಬಾರದು. ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ಈ ನಿಟ್ಟಿನಲ್ಲಿ 2014ರಿಂದ ಪ್ರತಿ ವರ್ಷ ‘ಇಂಟರ್ನ್ಯಾಷನಲ್ ಡೇ ಟು ಎಂಡ್ ಇಂಪ್ಯೂನಿಟಿ ಫಾರ್ ಕ್ರೈಮ್ಸ್ ಅಗೈನ್ಸ್ಟ್‌ ಜರ್ನಲಿಸ್ಟ್ಸ್’ ಎಂಬ ದಿನವನ್ನು ನವೆಂಬರ್​ 2ರಂದು ಆಚರಿಸಲಾಗುತ್ತದೆ. ಈ ವರ್ಷದ ದಿನದ ಕಾರ್ಯಕ್ರಮವನ್ನು ‘ಪತ್ರಕರ್ತರ ಮೇಲಿನ ಹಿಂಸಾಚಾರ, ಚುನಾವಣಾ ಸಮಗ್ರತೆ ಮತ್ತು ಸಾರ್ವಜನಿಕ ನಾಯಕತ್ವದ ಪಾತ್ರ’ ಎಂಬ ಘೋಷ ವಾಕ್ಯದೊಂದಿಗೆ ಚರ್ಚಿಸಲಾಗುತ್ತದೆ. ಮಾನವ […]

ಗರ್ಭಿಣಿಯರ ಆರೋಗ್ಯದ ಮೇಲೆ ಹೆಚ್ಚು ನಿಗಾ : ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ ಪತ್ತೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಈ ಕುರಿತು ಕಟ್ಟೆಚ್ಚರ ವಹಿಸುತ್ತಿದೆ.ಇತ್ತೀಚೆಗೆ ಕೇರಳದಲ್ಲಿ ಪತ್ತೆಯಾಗಿರುವ ಝಿಕಾ ವೈರಸ್ ಇದೀಗ ಚಿಕ್ಕಬಳ್ಳಾಪುರದಲ್ಲಿ ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಇಲಾಖೆ ಸಿದ್ಧಪಡಿಸುತ್ತಿದೆ. ಈ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 5,000ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಆರೋಗ್ಯ ಇಲಾಖೆ ತಪಾಸಣೆಗೆ ಒಳಪಡಿಸಲಿದೆ. ಅದರಲ್ಲೂ ಮುಖ್ಯವಾಗಿ, ಗರ್ಭಿಣಿಯರು ಸೇರಿದಂತೆ ಇತರರ ಮೇಲೆ ಹೆಚ್ಚು ನಿಗಾ ವಹಿಸುತ್ತಿದೆ. ಜಿಲ್ಲೆಯ ನಾಗರಿಕರಲ್ಲಿ ಝಿಕಾ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ್ ಸ್ಪಷ್ಟಪಡಿಸಿದ್ದಾರೆ.ಆರೋಗ್ಯ […]

ಭಾರತೀಯರಿಗೆ ಅತ್ಯಧಿಕ ಲಾಭ : 5 ಲಕ್ಷ ವಲಸಿಗರಿಗೆ ವೀಸಾ ನೀಡಲಿದೆ ಕೆನಡಾ

ಟೊರೊಂಟೊ: 2024-26ರ ವಲಸೆ ಯೋಜನೆಗಳನ್ನು ಅನಾವರಣಗೊಳಿಸಿದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಸಚಿವ ಮಾರ್ಕ್ ಮಿಲ್ಲರ್, 2026ರಿಂದ ವಲಸೆ ಮಟ್ಟವನ್ನು 5,00,000ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.2023ರ ವೇಳೆಗೆ ಕೆನಡಾ ತನ್ನ ದೇಶದೊಳಗೆ 4,85,000 ಹೊಸ ವಲಸಿಗರಿಗೆ ಪ್ರವೇಶಾವಕಾಶ ಕಲ್ಪಿಸಲಿದ್ದು, 2025ರ ವೇಳೆಗೆ ಈ ಸಂಖ್ಯೆಯನ್ನು 5,00,000ಕ್ಕೆ ಹೆಚ್ಚಿಸಲು ಅದು ಯೋಜಿಸಿದೆ.ಕೆನಡಾ 2025ರ ವರ್ಷದಲ್ಲಿ ತನ್ನ ದೇಶದೊಳಗೆ 5 ಲಕ್ಷ ವಲಸಿಗರನ್ನು ಬರಮಾಡಿಕೊಳ್ಳಲಿದೆ. ಕಳೆದ ವರ್ಷ 1,18,000 ಕ್ಕೂ ಹೆಚ್ಚು ಭಾರತೀಯರು ಕೆನಡಿಯನ್ ಪರ್ಮನೆಂಟ್ ರೆಸಿಡೆನ್ಸಿ (ಪಿಆರ್) ಯನ್ನು […]