ಅ.24,25 ರಂದು ಉಡುಪಿಯಲ್ಲಿ ಕೆನರಾ ರಿಟೈಲ್ ಮೇಳ: ದೀಪಾವಳಿಗೆ ಕೆನರಾ ಬ್ಯಾಂಕ್ ನೀಡ್ತಿದೆ ಈ ಭರ್ಜರಿ ಆಫರ್

ಉಡುಪಿ:ದೀಪಾವಳಿ ಹಬ್ಬದ ಪ್ರಯುಕ್ತ ಏರ್ಪಡಿಸುತ್ತಿರುವ ಕೆನರಾ ರಿಟೈಲ್ ಮೇಳ – 2026 ಅ. 24 & 25 ರಂದು, ಬೆಳಿಗ್ಗೆ 10.00 ರಿಂದ ಸಂಜೆ 8.00 ರವರೆಗೆ ಎಮ್.ಜಿ.ಎಮ್. ಕಾಲೇಜು ಗ್ರೌಂಡ್, ಉಡುಪಿ ಇಲ್ಲಿ ನಡೆಯಲಿರುವುದು.
ಉಚ್ಚಿಲ ದಸರಾದಲ್ಲಿ ಪುಟಾಣಿಗಳ ಅಬ್ಬರ: ಶಾರದಾ ವೇಷ, ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ!

ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾದ ಸಂಭ್ರಮ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ನವದುರ್ಗೆಯರ ದರ್ಶನದ ಜತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸುತ್ತಿವೆ. ದಸರಾ ಉತ್ಸವದ ಅಂಗವಾಗಿ ನಡೆದ ಶಾರದಾ ದೇವಿಯ ಛದ್ಮವೇಷ ಹಾಗೂ ಕಿನ್ನ ಪಿಲಿ ನಲಿಕೆ (ಪುಟಾಣಿ ಹುಲಿ ಕುಣಿತ) ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು. ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ನಡೆಯುತ್ತಿರುವ ಉಚ್ಚಿಲ ದಸರಾದಲ್ಲಿ ಪುಟಾಣಿ ಮಕ್ಕಳ ಶಾರದಾ ದೇವಿಯ ವೇಷ ಭಕ್ತಿಭಾವ ಮೂಡಿಸಿದರೆ, ತಾಸೆಯ ಅಬ್ಬರಕ್ಕೆ ಹೆಜ್ಜೆ ಹಾಕಿದ ಮಕ್ಕಳ […]
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಅ. 14 ರಂದು ನಗರದ ಅಜ್ಜರಕಾಡು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಯವರ ಕಚೇರಿಯ ಶ್ರೀ ಕೃಷ್ಣ ಸಭಾಂಗಣದಲ್ಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ 2026 ರ ಕಾರ್ಯಕ್ರಮವನ್ನು ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಕಾರ್ಯಕ್ರಮ ಉದ್ಘಾಟಿಸಿ, ಮಾನಸಿಕ ಆರೋಗ್ಯಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು […]
ಭಾರತೀಯ ನೌಕಾಪಡೆಯಲ್ಲಿದೆ ಅಪ್ರೆಂಟಿಸ್ ಹುದ್ದೆಗಳು, ಆಸಕ್ತಿ ಇದ್ರೆ ಅರ್ಜಿ ಸಲ್ಲಿಸಿ

ಬೆಂಗಳೂರು: ಭಾರತೀಯ ನೌಕಾಪಡೆಯ ಕಾರವಾರ ನೇವಲ್ ಡಾಕ್ಯಾರ್ಡ್ ಹಾಗೂ ಗೋವಾದ ದಬೋಲಿಮ್ನ ನೇವಲ್ ಏರ್ಕ್ರಾಫ್ಟ್ ಯಾರ್ಡ್ನಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ ವಿದ್ಯಾರ್ಹತೆ ಮತ್ತು ವಯೋಮಿತಿ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಹಾಗೂ ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು. ಕನಿಷ್ಠ 14 ವರ್ಷ ಹಾಗೂ ಗರಿಷ್ಠ 18 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆಯ್ಕೆ ಪ್ರಕ್ರಿಯೆ ಅಭ್ಯರ್ಥಿಗಳನ್ನು ಮೆರಿಟ್, ಲಿಖಿತ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆಯ ಆಧಾರದ […]
ಮೈಸೂರು ದಸರಾ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ,100 ಅತ್ಯುತ್ತಮ ರೀಲ್ಸ್ಗಳಿಗೆ ಪ್ರಶಸ್ತಿ, ಮುಖ್ಯಮಂತ್ರಿ ಘೋಷಣೆ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ಕುರಿತು ರೀಲ್ಸ್ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ದಸರಾ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಹಂಚಿಕೊಳ್ಳುವಂತೆ ಯುವಕ-ಯುವತಿಯರಿಗೆ ಅವರು ಕರೆ ನೀಡಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ಆರಂಭದಿಂದ ಅಂತ್ಯದವರೆಗೆ ಜನರಿಗೆ ಇಷ್ಟವಾಗುವ ಕಾರ್ಯಕ್ರಮಗಳು, ದೀಪಾಲಂಕಾರ, ಜಂಬೂಸವಾರಿ, ಆಹಾರ ಮೇಳ ಸೇರಿದಂತೆ ವಿವಿಧ ವಿಷಯಗಳ ಕುರಿತು ರೀಲ್ಸ್ ಮಾಡಬಹುದು. ‘ಮೈಸೂರು ದಸರಾ-2026’ ಎಂದು ಟ್ಯಾಗ್ ಮಾಡಲಾದ […]