ಕಂಬಳ ಕೂಟದಲ್ಲಿ ಮಿಂಚಿ ಸಾಧನೆಗೈದ ಕುಕ್ಕುಂದೂರು ಕಂಬಳ ಕೋಣ ‘ಅಪ್ಪು’ ಮಂಗಳವಾರ ಸಾವನ್ನಪ್ಪಿದ್ದು ಕಂಬಳ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇದು ಕುಕ್ಕುಂದೂರು ರವೀಂದ್ರ ಕುಮಾರ್ ಅವರ ಮುದ್ದಿನ ಕೋಣವಾಗಿತ್ತು.
೨೨ ಹರೆಯದ ಅಪ್ಪುವಿಗೆ ಕಳೆದ ಕೆಲವು ವಾರದಿಂದ ಬೇಧಿಗೆ ಚಿಕಿತ್ಸೆ ನೀಡಲಾಗಿತ್ತು,ಆದರೆ ಅಪ್ಪು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಸಾವ್ನಪ್ಪಿದೆ.
ಕಂಬಳಕೂಟದಲ್ಲಿ ಅಪ್ಪುವಿಗೆ ಭಾರೀ ಹೆಸರಿತ್ತು. 6-7 ವರ್ಷದ ಅವಧಿಯಯಲ್ಲಿ ಪ್ರತಿ ವರ್ಷವೂ ಪದಕ ಪಡೆದು 40-42 ಪದಕ ತನ್ನದಾಗಿಸಿಕೊಂಡಿತ್ತು ಅಪ್ಪು ಪ್ರತೀ ವರ್ಷದ ಕಂಬಳ ಕೂಟದಲ್ಲಿ ಹೊಸ ಹೊಸ ಸಾಧನೆ ಮಾಡಿತ್ತು. ಈ ಕೋಣ ಭಾರೀ ಸೌಮ್ಯ ಸ್ವಭಾವದ್ದಾಗಿತ್ತು ಮತ್ತು ಕಂಬಳ ಪ್ರಿಯರ ಮನಗೆದ್ದಿತ್ತು