ಪ್ರತಿಭಾ ಕಾರಂಜಿ: ಎಲ್ ಸಿ ಆರ್ ವಿದ್ಯಾಸಂಸ್ಥೆಗೆ ಸಮಗ್ರ ಪ್ರಶಸ್ತಿ

ಬಂಟ್ವಾಳ:ದ.ಕ.ಜಿ.ಪ.ಮಾ.ಹಿ.ಪ್ರಾ ಶಾಲೆ ಉಳಿ ಕಕ್ಯಪದವು ಇಲ್ಲಿ ಇತ್ತೀಚೆಗೆ ನಡೆದ ಮಧ್ವ ಮತ್ತು ಉಳಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಎಲ್ ಸಿ ಆರ್ ವಿದ್ಯಾಸಂಸ್ಥೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಎಲ್ ಸಿ ಆರ್‌ ಇಂಡಿಯನ್ ಸ್ಕೂಲ್‌ ಕಕ್ಯಪದವು ಇಲ್ಲಿಯ ಒಟ್ಟು ೭೦ ವಿದ್ಯಾರ್ಥಿಗಳು ಭಾಗವಹಿಸಿ, ಹಿರಿಯ ವೈಯುಕ್ತಿಕ ವಿಭಾಗದಲ್ಲಿ 8 ಪ್ರಥಮ , 4 ದ್ವಿತೀಯ,2 ತೃತೀಯಸ್ಥಾನವನ್ನು, ಕಿರಿಯ ವೈಯುಕ್ತಿಕ ವಿಭಾಗದಲ್ಲಿ 7 ಪ್ರಥಮ , 6 ದ್ವಿತೀಯ, 1ತೃತೀಯಸ್ಥಾನವನ್ನು ಹಾಗೂ ಹಿರಿಯ ಸಾಮೂಹಿಕ ವಿಭಾಗದಲ್ಲಿ 3ಪ್ರಥಮ, 1 ದ್ವಿತೀಯ, 1 ತೃತೀಯಸ್ಥಾನವನ್ನು, ಕಿರಿಯ ಸಾಮೂಹಿಕ ವಿಭಾಗದಲ್ಲಿ 3  ಪ್ರಥಮ ಸ್ಥಾನವನ್ನು ಗಳಿಸಿ ಉಳಿ ಕ್ಲಸ್ಟರ್‌ನಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.