ಫೆ. 13ರಿಂದ 21ರವರೆಗೆ  ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ಶಿಲಾಮಯ ದೇವಸ್ಥಾನ ಲೋಕಾರ್ಪಣೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು

ಹೆಬ್ರಿ : ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ಶಿಲಾಮಯ ದೇವಸ್ಥಾನ ಲೋಕಾರ್ಪಣೆ, ಶ್ರೀ ಅನ್ನಪೂರ್ಣೆಶ್ವರಿ, ಗಣಪತಿ ದೇವರು ಮತ್ತು ಶ್ರೀ ಆದಿಶಂಕರಾಚಾರ್ಯರ ಶಿಲಾಬಿಂಬ ಪ್ರತಿಷ್ಠೆ ಮತ್ತು ಮಹಾ ಕುಂಭಾಭಿಷೇಕ ಫೆ. 13ರಿಂದ 21ರವರೆಗೆ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು

ಫೆ. 13ರಂದು ಸಂಜೆ 5 ಗಂಟೆಗೆ ಪರಮಪೂಜ್ಯ ಗುರುಗಳಿಗೆ ಮತ್ತು ತಂತ್ರಿಗಳವರಿಗೆ ಹಾಗೂ ವೈದಿಕರಿಗೆ ವಿದ್ಯುಕ್ತ ಸ್ವಾಗತ. ಶಿಲ್ಪ ಪೂಜೆ, ಶಿಲ್ಪ ಗೌರವ, ಆಲಯ ಪರಿಗ್ರಹ. ಫೆ. 14ರಂದು ಬೆಳಿಗ್ಗೆ 8-40ಕ್ಕೆ ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಧ್ವಜಾರೋಹಣ, ಗುರುಗಣಪತಿ ಪೂಜಾ, ಬ್ರಹ್ಮಕೂರ್ಚೆ ಹೋಮ, ಪುಣ್ಯಾಹ ವಾಚನ ತಂತ್ರಿವರಣ, ಆಚಾರ್ಯ ವರಣ, ದೇವಾನಾಂದಿ, ಕೌತುಕಬಂಧನ, ಅಂಕುರಾರ್ಪಣ.

ಸಂಜೆ 5 ಗಂಟೆಗೆ ಶಿಲ್ಪಿಗಳಿಂದ ನಾಗರೂಢ ಪರಿಗ್ರಹ, ವಾಸ್ತು ರಕ್ಷೋಘ್ನ, ನಾಗದೇವ ಬಿಂಬ ಅಧಿವಾಸಗಳು, ನವನಾಗ ಕಲಶ ಪ್ರತಿಷ್ಠೆ, ಅಧಿವಾಸಗಳು.

ಫೆ. 15ರಂದು ಬೆಳಿಗ್ಗೆ 8.45ಕ್ಕೆ ಮೀನ ಲಗ್ನ ಸುಮುಹೂರ್ತದಲ್ಲಿ ನಾಗಬಿಂಬ ಪ್ರತಿಷ್ಠೆ, ಪ್ರಸನ್ನ ಪೂಜೆ, ಪರಿವಾರ ದೈವ ಪ್ರತಿಷ್ಠೆ, ತೀರ್ಥ ಪ್ರಸಾದ ವಿತರಣೆ. ಸಂಜೆ ದೇವಾಲಯದಲ್ಲಿ ಪ್ರಸಾದ ಶುದ್ದಿ, ವಾಸ್ತು ರಾಕ್ಷೋಘ್ನ, ದಿಕ್ಷಾಲ ಬಲಿ, ಅಂಕುರ ಪೂಜೆ. ಫೆ. 16ರಂದು ಬೆಳಿಗ್ಗೆ ಗಣಪತಿ ಹೋಮ, ಮನ್ಯುಸೂಕ್ತ ಹೋಮ, ಅಂಕುರ ಪೂಜೆ, ಪ್ರಾಯಶ್ಚಿತ ಹೋಮಗಳು. ಸಂಜೆ ದುರ್ಗಾ ಪಾರಾಯಣ, ಮೂಲಮಂತ್ರ ಜಪ

ಫೆ. 17ರಂದು ಬೆಳಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ನವಗ್ರಹ ಮೃತ್ಯುಂಜಯ ಹೋಮ, ಸರಸ್ವತಿ ಸೂಕ್ತ ಹೋಮ, ಶ್ರೀ ಸೂಕ್ತ ಹೋಮ, ದುರ್ಗಾ ಹೋಮ. ಸಂಜೆ ದುರ್ಗಾ ಪಾರಾಯಣ, ಮೂಲಮಂತ್ರ ಜಪ. ಫೆ. 18ರಂದು ಬೆಳಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ಗುರು ಪಾದ ಪೂಜೆ, ಉಗ್ರಾಣ ಮುಹೂರ್ತ, ಸಂಜೆ ಪಾರಾಯಣ, ಮೂಲಮಂತ್ರ ಜಪ.

ಫೆ. 19 ರಂದು ಬೆಳಿಗ್ಗೆ ಗಣಪತಿ ಹೋಮ, ಗುರು ಯಜ್ಞ ಗಣೇಶ ಅಥರ್ವಶೀಷ ಹೋಮ, ಶ್ರೀ ವಿಶ್ವಕರ್ಮ ಹೋಮ, ಸಂಜೆ ಮಂಟಪ ಸಂಸ್ಕಾರ, ಯಾಗ ಶಾಲೆಯಲ್ಲಿ ವಾಸ್ತು ಹೋಮ. ಫೆ. 20ರಂದು ಬೆಳಿಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ಮಂಡಲ ರಚನೆ, ಸಂಜೆ 4 ಗಂಟೆಗೆ ಮಂಡಲ ಪೂಜೆ, ಕಲಶ ಪೂರಣ, ಕಲಶಾಧಿವಾಸ ಹೋಮಾಧಿಗಳು, ಬಿಂಬ ಶುದ್ಧಿ, ಜಲಾಧಿವಾಸಮ ಕ್ಷೀರಾಧಿವಾಸ, ಧ್ಯಾನಧಿವಾಸ, ಪ್ರಷ್ಠಾಧಿವಾಸ, ಶಯಾಧಿವಾಸ, ನಿದ್ರಾ ಕಲಶ, ಪೀಠನ್ಯಾಸ, ರತ್ನನ್ಯಾಸ, ಶಿಖರ ಕಲಶ ಪೂಜೆ.

ಫೆ. 21ರಂದು ಬೆಳಿಗ್ಗೆ ಪ್ರತಿಷ್ಠಾಧಿ ಹೋಮಗಳು, ಅಷ್ಠಬಂಧ ಶುದ್ಧಿ, ಶಿಖರ ಪ್ರತಿಷ್ಠೆ, 9.30ಕ್ಕೆ ಬಿಂಬ ಪ್ರತಿಷ್ಠೆಗಳು, ಅಷ್ಟಬಂಧ ಲೇಪನ, ಪ್ರಾಣ ಪ್ರತಿಷ್ಠೆ, ಬಿಂಬನ್ಯಾಸಾಧಿಗಳು ಪರಿಕಲಶಾಭಿಷೇಕ, 11-37ಕ್ಕೆ ಮೇಷ ಲಗ್ನದಲ್ಲಿ ಬ್ರಹ್ಮಕುಂಭಾಭಿಷೇಕ ಅನುಜ್ಞಾ ವಿಧಿ, ಪ್ರಸನ್ನ ಪೂಜೆ, ಮಹಾಪೂಜೆ, ಅಷ್ಠಾವಧಾನ ಸೇವೆ, ಪ್ರಾರ್ಥನೆ, ಆಚಾರ್ಯ ಪೂಜಾ, ಸುವಾಸಿನಿ ಪೂಜಾ, ದಂಪತೀ ಪೂಜಾ, ಸಂಭಾವನೆ, ಬ್ರಹ್ಮಾರ್ಪಣೆ, ಫಲಮಂತ್ರಾಕ್ಷತೆ ಪ್ರಸಾದ ವಿತರಣೆಯಾಗಿ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ರಂಗಪೂಜೆ, ಪೂಜೋತ್ಸವ ಜರುಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಪ್ರತಿದಿನ ಸಂಜೆ 6ರಿಂದ 9ಗಂಟೆಯವರೆಗೆ ಭಜನೆ, ಭಕ್ತಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆ. 20ರಂದು ಸಂಜೆ 7 ಗಂಟೆಗೆ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಪುತ್ತೂರು ಇವರಿಂದ ಭರತನಾಟ್ಯ ಜರುಗಲಿದೆ. ಫೆ. 21ರಂದು ಸಂಜೆ 6ಗಂಟೆಯಿಂದ ಜಗದೀಶ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ.

ಧಾರ್ಮಿಕ ಸಭೆಗಳು

ಫೆ. 18ರಂದು ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ದಿವ್ಯ ಉಪಸ್ಥಿತಿ ಹಾಗೂ ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ, ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಶಾಖಾ ಮಠ ಕಜ್ಕೆಯ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ವಹಿಸಲಿದ್ದಾರೆ.

ಫೆ. 20ರಂದು ಸಂಜೆ 4 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತಿ ಮತ್ತು ಅಧ್ಯಕ್ಷತೆಯನ್ನು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ವಹಿಸಲಿದ್ದಾರೆ. ಇವರೊಂದಿಗೆ ದಿವ್ಯ ಉಪಸ್ಥಿಯಲ್ಲಿ ಮುರುಝಾಧೀಶ್ವರ ಮಠಾಧೀಶ ಹಾಗೂ ಸಿಂದಗಿ ವಿಶ್ವಬ್ರಾಹ್ಮಣ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಶ್ರೀ ರಾಮಚಂದ್ರ ಮಹಾಸ್ವಾಮಿ ಹಾಗೂ ದಕ್ಷಿಣ ಬೆಂಗಳೂರು ಶ್ರೀ ಆದಿಶಂಕರಾಚಾರ್ಯ ಜಗದ್ಗುರು ಪೀಠ ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿ ವಹಿಸಲಿದ್ದಾರೆ.

ಫೆ. 21ರಂದು ಮಧ್ಯಾಹ್ನ 3 ಗಂಟೆಗೆ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಶ್ರೀ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶಹಪುರ ಶ್ರೀ ವಿಶ್ವಕರ್ಮ ಏಕದಂಡಗಿ ಮಠ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಮಹಾಸ್ವಾಮೀಜಿ, ವಡ್ನಾಳ್ ಮಹಾಸಂಸ್ಥಾನ ಮಠ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮನಂದ ಸರಸ್ವತಿ ಮಹಾಸ್ವಾಮೀಜಿ, ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಠಲದಾಸ ಮಹಾಸ್ವಾಮೀಜಿ ಹಾಗೂ ಕೊರಂಗ್ರಪಾಡಿ ಜ್ಯೋತಿರ್ವಿದ್ವಾನ್ ಮತ್ತು ಜ್ಯೋತಿಷಿ ಶ್ರೀ ಕೆ.ಪಿ. ಕುಮಾರಗುರು ತಂತ್ರಿಯವರು ದಿವ್ಯ ಉಪಸ್ಥಿಯಲ್ಲಿರಲಿದ್ದಾರೆ.

ಹಸಿರು ಹೊರೆಕಾಣಿಕೆ
ಫೆ. 18ರಂದು ಬೆಳಗ್ಗೆ 9.30ಕ್ಕೆ ನಾಲ್ಕೂರು ಗ್ರಾಮ ಪಂಚಾಯತ್‌ ವಠಾರದಿಂದ ಹೊರೆಕಾಣಿಕೆಯ ಭವ್ಯ ಮೆರವಣೆಗೆ ನಡೆಯಲಿದೆ.