ಬೆಂಗಳೂರು:ಕನ್ನಡದ ಖ್ಯಾತ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ (84) ಜೀವನದ ಉತ್ಸವವನ್ನು ನಿಲ್ಲಿಸಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಭಾನುವಾರ ನಿಧನರಾಗಿದ್ದಾರೆ.ಅವರು ಇತ್ತೀಚೆಗೆ ಅನಾರೋಗ್ಯದ ನಿಮಿತ್ತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಬಳಿಕ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು.ಸ್ವಗೃಹದಲ್ಲಿದ್ದ ಅವರು ಕೊನೆಯುಸಿರೆಳೆದಿದ್ದಾರೆ.
ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಶ್ರೇಷ್ಢ ಕವಿಯಾಗಿ ಗುರುತಿಸಿಕೊಂಡಿದ್ದರು. ಇವರು ಬರೆದ ಜೋಗದಸಿರಿ ಬೆಳಕಿನಲ್ಲಿ…ತುಂಗೆಯತೆನೆ ನಲುಕಿನಲ್ಲಿ..ನಿತ್ಯೋತ್ಸವ ತಾಯೇ ನಿತ್ಯೋತ್ಸವ, ಕುರಿಗಳು ಸಾರ್ ಕುರಿಗಳು ಮೊದಲಾದ ಹಾಡುಗಳು ಕನ್ನಡಿಗರ ಬಾಯಲ್ಲಿ ಆಗಾಗ ಕೇಳಿಸುತ್ತಿದ್ದವು. ಇದೀಗ ಜೀವನದ ಉತ್ಸವವನ್ನು ನಿಲ್ಲಿಸಿದ್ದಾರೆ ಸಿಸಾರ್ ಅಹಮದ್.