ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಕೆ ಪ್ರಶಾಂತ್ ಬಾಳಿಗಾ ಅವಿರೋಧ ಆಯ್ಕೆ

ಉಡುಪಿ: ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 30 ನೇ ವಾರ್ಷಿಕ ಮಹಾಸಭೆ ಸೆ. 25 ರಂದು ಸಂಘದ ಕೋಟೇಶ್ವರ ಗೋವಿಂದರಾಯ ವಿಠ್ಠಲ್ ಕಾಮತ್ ಸಭಾಂಗಣದಲ್ಲಿ ಜರುಗಿತು.

ಕೆ ಪ್ರಶಾಂತ್ ಬಾಳಿಗಾ, ಕೆ.ಕೆ. ಫಿಶ್ ನೆಟ್ ಕೋ ನೇಜಾರ್ ಇವರು 2022-2023 ಸಾಲಿಗೆ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹರೀಶ್ ಕುಂದರ್, ಯು ಅಜಿತ್ ಶೆಣೈ, ಎಂ ವಸಂತ್ ಕಿಣಿ, ಕಾರ್ಯದರ್ಶಿಯಾಗಿ ಎಂ ವಲ್ಲಭ್ ಭಟ್, ಕೋಶಾಧಿಕಾರಿಯಾಗಿ ಕೃಷ್ಣ ಪ್ರಸಾದ್, ಜೊತೆ ಕಾರ್ಯದರ್ಶಿಯಾಗಿ ಕೆ ಸುರೇಶ ಶೆಣೈ, ಶ್ರೀನಿವಾಸ ಶೆಟ್ಟಿಗಾರ್, ರಂಜನ್ ಕಲ್ಕೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಮಾಜಿ ಅಧ್ಯಕ್ಷ ಐ ಆರ್ ಫೆರ್ನಾಂಡೀಸ್ ಮತ್ತು ಎಲ್ಲ ಪೂರ್ವ ಅಧ್ಯಕ್ಷರು ಸೇರಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆಗೈದು ಗೌರವ ಸೂಚಿಸಿದರು.

ಸಂಘದ ಹಿರಿಯ ಮಾಜಿ ಅಧ್ಯಕ್ಷರುಗಳಾದ ಎಂ ವಿಶ್ವನಾಥ್ ಭಟ್ , ವಿನ್ಸೆಂಟ್ ಪಿಂಟ, ಜಾನ್ ಡಿಸಿಲ್ವ ಶುಭಾಶಂಸನೆಗೈದರು. ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ವೆಂಕಟೇಶ್ ಆರ್ ಪೈ, ವಾಮನ ಭಟ್ ನಿರೂಪಿಸಿದರು.