ಖ್ಯಾತ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ನಿಧನ

ಚಿಕ್ಕಮಗಳೂರು: ಖ್ಯಾತ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ (43) ಇಂದು ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಮನೆಯಲ್ಲಿ ಅವರಿಗೆ ಇಂದು ಹೃದಯಘಾತ ಸಂಭವಿಸಿದ್ದು, ತಕ್ಷಣವೇ ಅವರನ್ನು ಗೋಣಿಬೀಡು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮೊದಲೇ ಸುನಿಲ್ ಹೆಗ್ಗರವಳ್ಳಿ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದ ಸುನೀಲ್ ಅವರು, ಹಾಯ್ ಬೆಂಗಳೂರ್ ಪತ್ರಿಕೆ, ಜನಶ್ರೀ‌ ನ್ಯೂಸ್ ಚಾನೆಲ್ ನಲ್ಲಿ ಕಾರ್ಯನಿರ್ವಹಿಸಿದ್ದರು. ಆದರೆ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು.

ಮೂರು ವರ್ಷಗಳ ಹಿಂದೆ ಸುನಿಲ್ ಹೆಗ್ಗರವಳ್ಳಿಯ ಕೊಲೆಗೆ ರವಿ ಬೆಳೆಗರೆ ಸುಪಾರಿ ಕೊಟ್ಟಿದ್ದರು ಎಂಬ ಸುದ್ದಿ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು.