ಮಂಗಳೂರು: ಮಾಮ್ಸ್ ಆಫ್ ಮಂಗಳೂರು (MOM) ಎಂಬ ಆನ್ಲೈನ್ ಗುಂಪೊಂದು, ಮಂಗಳೂರಿನ ಸುತ್ತಮುತ್ತಲಿನ ತಾಯಂದಿರಿಗೆ ಮೇ 8 ಭಾನುವಾರದಂದು ಫೋರಮ್ ಫಿಜಾ ಮಾಲ್ನಲ್ಲಿ ‘ಸೂಪರ್ ಮಾಮ್ 2022 – ಸೀಸನ್ 4’ ಸ್ಪರ್ಧೆಯನ್ನು ಆಯೋಜಿಸಿದ್ದು, ಹಲವಾರು ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಇಎಲ್ಸಿ (ಲಿವ್ ಯುವರ್ ಲರ್ನಿಂಗ್), ಸಿ.ಎಫ್.ಎ.ಎಲ್ (ಬಿ ಯುವರ್ ಬೆಸ್ಟ್) ವಹಿಸಿಕೊಂಡಿದ್ದರೆ, ಫೋರಮ್ ಫಿಜಾ ಮಾಲ್ನ ಸಹಯೋಗದೊಂದಿಗೆ ಬೋನ್ ಮಸಾಲಾ ಸಂಸ್ಥೆಯು ಸಹ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು. ಕಾರ್ಯಕ್ರಮವನ್ನು ಡ್ರೀಮ್ ಕ್ಯಾಚರ್ಸ್ ನಿರ್ವಹಿಸಿದ್ದರು. ಕಾರ್ಯಕ್ರಮದ ಸಂಘಟನೆಯನ್ನು ಪೃಥ್ವಿ ಗಣೇಶ್ ಕಾಮತ್ ವಹಿಸಿದ್ದರು.
ಜೋಸ್ಮಿತಾ ಡಿ’ಸಿಲ್ವಾ ಸೂಪರ್ ಮಾಮ್ 2022 – ಸೀಸನ್ 4 ಸ್ಪರ್ಧೆಯ ವಿಜೇತರಾಗಿ ಹೊರಹೊಮ್ಮಿದರೆ, ಮೊದಲ ರನ್ನರ್ ಅಪ್ ಸ್ಥಾನವನ್ನು ವೆರೋನಿಕಾ ದಾಂತಿಸ್ ಮತ್ತು ಎರಡನೇ ರನ್ನರ್ ಅಪ್ ಸ್ಥಾನವನ್ನು ವೀಣಾ ರಾಡ್ರಿಗಸ್ ತಮ್ಮದಾಗಿಸಿಕೊಂಡರು.