ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ನಲ್ಲಿ ಉದ್ಯೋಗಾವಕಾಶ

ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 29 ಅಸಿಸ್ಟೆಂಟ್, ಮೆಂಬರ್ ಟೆಕ್ನಿಕಲ್ ಸ್ಟಾಫ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ (Application) ಸಲ್ಲಿಸಬಹುದು.

ಸೆಪ್ಟೆಂಬರ್ 11, 2023 ಅಪ್ಲಿಕೇಶನ್ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ (Online) ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಬೇಕಿದ್ರೆ ಈಗಲೇ ಅರ್ಜಿ ಹಾಕಿ.

 

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

 

ಸಂಸ್ಥೆ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ

ಹುದ್ದೆ ಅಸಿಸ್ಟೆಂಟ್, ಮೆಂಬರ್ ಟೆಕ್ನಿಕಲ್ ಸ್ಟಾಫ್

ಒಟ್ಟು ಹುದ್ದೆ 29

ವಿದ್ಯಾರ್ಹತೆ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ, ಎಂ.ಎಸ್ಸಿ, ಪಿಎಚ್.ಡಿ

ವೇತನ ಮಾಸಿಕ ₹ 56,100-2,15,900

ಉದ್ಯೋಗದ ಸ್ಥಳ ಭಾರತ

ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 11, 2023

 

ಹುದ್ದೆಯ ಮಾಹಿತಿ:

ಮೆಂಬರ್ ಟೆಕ್ನಿಕಲ್ ಸ್ಟಾಫ್- 8

ಸೀನಿಯರ್ ಫೈನಾನ್ಸ್ ಆಫೀಸರ್- 1

ಫೈನಾನ್ಸ್ ಆಫೀಸರ್-1

ಮೆಂಬರ್ ಟೆಕ್ನಿಕಲ್ ಸಪೋರ್ಟ್ ಸ್ಟಾಫ್- 6

ಅಸಿಸ್ಟೆಂಟ್- 12

ಆಫೀಸ್ ಅಟೆಂಡೆಂಟ್- 1

 

ವಿದ್ಯಾರ್ಹತೆ:

ಮೆಂಬರ್ ಟೆಕ್ನಿಕಲ್ ಸ್ಟಾಫ್- ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ, ಎಂ.ಎಸ್ಸಿ, ಪಿಎಚ್.ಡಿ

ಸೀನಿಯರ್ ಫೈನಾನ್ಸ್ ಆಫೀಸರ್- CA ಅಥವಾ ICWA, ಬಿ.ಕಾಂ, ಎಂಬಿಎ, ಸ್ನಾತಕೋತ್ತರ ಪದವಿ

ಫೈನಾನ್ಸ್ ಆಫೀಸರ್- CA ಅಥವಾ ICWA, ಬಿ.ಕಾಂ, ಎಂಬಿಎ, ಸ್ನಾತಕೋತ್ತರ ಪದವಿ

ಮೆಂಬರ್ ಟೆಕ್ನಿಕಲ್ ಸಪೋರ್ಟ್ ಸ್ಟಾಫ್- ಡಿಪ್ಲೊಮಾ

ಅಸಿಸ್ಟೆಂಟ್- ಪದವಿ, ಸ್ನಾತಕೋತ್ತರ ಪದವಿ

ಆಫೀಸ್ ಅಟೆಂಡೆಂಟ್- 10ನೇ ತರಗತಿ

 

KPSC Jobs: ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ವೇತನ:

ಮೆಂಬರ್ ಟೆಕ್ನಿಕಲ್ ಸ್ಟಾಫ್- ಮಾಸಿಕ ₹ 56,100-2,15,900

ಸೀನಿಯರ್ ಫೈನಾನ್ಸ್ ಆಫೀಸರ್- ಮಾಸಿಕ ₹ 67,700- 2,08,700

ಫೈನಾನ್ಸ್ ಆಫೀಸರ್- ಮಾಸಿಕ ₹ 56,100-1,77,500

ಮೆಂಬರ್ ಟೆಕ್ನಿಕಲ್ ಸಪೋರ್ಟ್ ಸ್ಟಾಫ್- ಮಾಸಿಕ ₹ 35,400-1,12,400

ಅಸಿಸ್ಟೆಂಟ್- ಮಾಸಿಕ ₹ 25,500-1,12,400

ಆಫೀಸ್ ಅಟೆಂಡೆಂಟ್- ಮಾಸಿಕ ₹ 18,000-56,900

 

ವಯೋಮಿತಿ:

ಮೆಂಬರ್ ಟೆಕ್ನಿಕಲ್ ಸ್ಟಾಫ್- 56 ವರ್ಷ

ಸೀನಿಯರ್ ಫೈನಾನ್ಸ್ ಆಫೀಸರ್- 56 ವರ್ಷ

ಫೈನಾನ್ಸ್ ಆಫೀಸರ್-56 ವರ್ಷ

ಮೆಂಬರ್ ಟೆಕ್ನಿಕಲ್ ಸಪೋರ್ಟ್ ಸ್ಟಾಫ್- 56 ವರ್ಷ

ಅಸಿಸ್ಟೆಂಟ್- 56 ವರ್ಷ

ಆಫೀಸ್ ಅಟೆಂಡೆಂಟ್- 30 ವರ್ಷ

 

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:

A ಗ್ರೂಪ್ ಹುದ್ದೆಗಳಿಗೆ ಎಲ್ಲಾ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕ ಪಾವತಿಸಬೇಕು.

A ಗ್ರೂಪ್ ಅಲ್ಲದ ಹುದ್ದೆಗಳಿಗೆ ಎಲ್ಲಾ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಪಾವತಿಸುವ ಬಗೆ- ಆನ್ಲೈನ್

ಉದ್ಯೋಗದ ಸ್ಥಳ:

ಭಾರತದಲ್ಲಿ ಎಲ್ಲಿ ಬೇಕಾದರೂ

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಟ್ರೇಡ್ ಟೆಸ್ಟ್

ಸ್ಕಿಲ್ ಟೆಸ್ಟ್

ಸಂದರ್ಶನ

 

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/07/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 11, 2023ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.