ಅಂಚೆ ಇಲಾಖೆಯಲ್ಲಿದೆ ಉದ್ಯೋಗ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಭಾರತೀಯ ಅಂಚೆ ಇಲಾಖೆ (India Post Office) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12 ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff)​, ಪೋಸ್ಟ್​​ಮ್ಯಾನ್(Post Man)​​, ಪೋಸ್ಟಲ್​​ ಅಸಿಸ್ಟೆಂಟ್(Postal Assistant)​​, ಸಾರ್ಟಿಂಗ್​ ಅಸಿಸ್ಟೆಂಟ್(Sorting Assistant)​ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, 12ನೇ ತರಗತಿ ಮತ್ತು ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆಫ್​ಲೈನ್(Offline-Postal)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 25ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಡಿಸೆಂಬರ್ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.indiapost.gov.in ಗೆ ಭೇಡಿ ನೀಡಬಹುದಾಗಿದೆ.

ಹುದ್ದೆಯ ಮಾಹಿತಿ:
ಮಲ್ಟಿ ಟಾಸ್ಕಿಂಗ್ ಸ್ಟಾಫ್​-03 ಪೋಸ್ಟ್​​ಮ್ಯಾನ್​​-04,ಪೋಸ್ಟಲ್​​ ಅಸಿಸ್ಟೆಂಟ್​​/ಸಾರ್ಟಿಂಗ್​ ಅಸಿಸ್ಟೆಂಟ್- 05

ವಿದ್ಯಾರ್ಹತೆ:

ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:

ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಈ ಕೆಳಕಂಡ ರೀತಿಯಲ್ಲಿ ಇರಬೇಕು.