ಭಾರತೀಯ ಅಂಚೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಖಾಲಿ ಇದೆ ವಿವಿಧ ಹುದ್ದೆಗಳು:ಅರ್ಜಿ ಸಲ್ಲಿಸಿ

ಭಾರತೀಯ ಅಂಚೆ ಇಲಾಖೆಯಲ್ಲಿ(Indian Postal Department) ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪೋಸ್ಟ್ ಜಾಬ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ದೆಹಲಿ ಅಂಚೆ ವೃತ್ತದಲ್ಲಿ(Delhi Post Circle) ಅಂಚೆ ಸಹಾಯಕ, ವಿಂಗಡಣೆ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಪೋಸ್ಟ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕ್ರೀಡಾ ಕೋಟಾದಲ್ಲಿ ಈ ಹುದ್ದೆಗಳನ್ನು ಬದಲಾಯಿಸಲಾಗುತ್ತಿದ್ದು, ಒಟ್ಟು 221 ಹುದ್ದೆಗಳಿವೆ.

ಇವುಗಳು ಕ್ರೀಡಾ ಕೋಟಾದಲ್ಲಿ ಭರ್ತಿ ಮಾಡಲಾಗುತ್ತಿರುವ ಹುದ್ದೆಗಳಾಗಿರುವುದರಿಂದ ಅಧಿಸೂಚನೆಯಲ್ಲಿ ನೀಡಿರುವ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದವರು ಮಾತ್ರ ಅರ್ಜಿ ಸಲ್ಲಿಸಬೇಕು. ಈ ಪೋಸ್ಟ್‌ಗಳನ್ನು ಆಫ್‌ಲೈನ್‌ಗೆ ಅಂದರೆ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಹಾಕಲು ಕೊನೆಯ ದಿನಾಂಕ – 2021 ನವೆಂಬರ್ 12

ಅರ್ಹತೆ- ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ವಿದ್ಯಾರ್ಹತೆ ಹಾಗೂ ಕ್ರೀಡಾ ಅರ್ಹತೆಗಳನ್ನು ಹೊಂದಿರಬೇಕು.

ವಯಸ್ಸು – ಪೋಸ್ಟ್‌ಮ್ಯಾನ್, ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ 18 ರಿಂದ 27 ವರ್ಷಗಳು, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ 18 ರಿಂದ 25 ವರ್ಷಗಳು.

ಅರ್ಜಿ ಶುಲ್ಕ- 100

ಭಾರತ ಪೋಸ್ಟ್ ನೇಮಕಾತಿ 2021: ಅರ್ಜಿ ಪ್ರಕ್ರಿಯೆ (Application Procedure)

ಹಂತ 1- ಅಭ್ಯರ್ಥಿಗಳು ಅರ್ಜಿಯನ್ನು https://www.indiapost.gov.in/ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಹಂತ 2- ಅರ್ಜಿ ನಮೂನೆಯು ಉದ್ಯೋಗ ಅಧಿಸೂಚನೆಯಲ್ಲಿಯೇ ಇರುತ್ತದೆ.

ಹಂತ 3- ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ಭರ್ತಿಮಾಡಿ.


ಹಂತ 4- ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.

ಹಂತ 5- ಕೊನೆಯ ದಿನಾಂಕದೊಳಗೆ ಅಧಿಸೂಚನೆಯಲ್ಲಿ ನೀಡಿರುವ ವಿಳಾಸಕ್ಕೆ ಅರ್ಜಿಗಳಿಗೆ ಸ್ಪೀಡ್ ಪೋಸ್ಟ್ ಅಥವಾ ನೋಂದಾಯಿತ ಪೋಸ್ಟ್ ಮೂಲಕ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗೆ ಇಲ್ಲಿದೆ PDF 

https://www.indiapost.gov.in/VAS/Pages/Recruitment/IP_04102021_DL.pdf

ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ(Address to which applications should be sent:)

ಸಹಾಯಕ ನಿರ್ದೇಶಕ (ಆರ್ & ಇ),

ಓ / ಓ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್,

ದೆಹಲಿ ವೃತ್ತ, ಮೇಘದೂತ ಭವನ,

ನವದೆಹಲಿ -110001