ಸಂತ್ರಸ್ತ ಪ.ಜಾತಿ/ಪ.ಪಂಗಡದವರ ಪರವಾಗಿ ವಾದ ಮಾಡಲು ವಕೀಲರ ನೇಮಕ: ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಅಧಿನಿಯಮದಡಿಯಲ್ಲಿ ದಾಖಲಾದ ಪ್ರಮುಖ ಪ್ರಕರಣಗಳಿಗೆ (ಕೊಲೆ, ಅತ್ಯಾಚಾರ, ಪೋಕ್ಸೋ, ಕೊಲೆ ಪ್ರಯತ್ನ, ತೀವ್ರ ಗಾಯ ಹಾಗೂ 7 ವರ್ಷಗಳಿಗೂ ಮೇಲ್ಪಟ್ಟು ಶಿಕ್ಷೆ ಇರುವ ಪ್ರಕರಣಗಳು) ಸಂಬoಧಿಸಿದoತೆ ಪ.ಜಾತಿ/ ಪ.ಪಂಗಡಗಳ (ದೌರ್ಜನ್ಯ ತಡೆ) ನಿಯಮಗಳು – 1995 ರಲ್ಲಿನ ನಿಯಮ-4ರ ಅನ್ವಯ ಘನ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ನುರಿತ ಹಾಗೂ ಅನುಭವಿ ನ್ಯಾಯವಾದಿಗಳನ್ನು ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ನಿಯಮಾನುಸಾರ ನೇಮಕ ಮಾಡಿಕೊಳ್ಳಲು ಅರ್ಹ […]
ಕುಂದಾಪುರ: ಅಲೆಗಳ ಅಬ್ಬರಕ್ಕೆ ಮುಳುಗಿದ ಪರ್ಸಿನ್ ಬೋಟ್; ಹಲವು ಮೀನುಗಾರರ ರಕ್ಷಣೆ

ಕುಂದಾಪುರ: ಗಂಗೊಳ್ಳಿ ಧಕ್ಕೆಯಿಂದ ಮಧ್ಯಾಹ್ನ ಬಳಿಕ ಮೀನುಗಾರಿಕೆಗೆ ತೆರಳಿದ ಶ್ರೀ ಬಾಲಾಂಜನೇಯ ಹೆಸರಿನ ಪರ್ಶಿನ್ ಮೀನುಗಾರಿಕಾ ಬೋಟೊಂದು ಧಕ್ಕೆಯ ಅನತಿ ದೂರದಲ್ಲಿ ಅಳಿವೆಯ ಸಮೀಪವೇ ಮುಳುಗಡೆಯಾಗಿದೆ. ಕೂಡಲೇ ಕಾರ್ಯಚರಣೆಗೆ ಇಳಿದ ಸಮೀಪದಲ್ಲಿದ್ದ ಬೋಟುಗಳ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ ಸಿಬಂದಿಗಳು ಬೋಟಿನಲ್ಲಿದ್ದ 27 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಬೋಟಿನ ತಳಭಾಗದ ಹಲಗೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವುದು ಬೋಟು ತ್ವರಿತವಾಗಿ ಮುಳುಗಲು ಕಾರಣವೆನ್ನಲಾಗಿದೆ. ಅವಘಡದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದಾಗಿ ತಿಳಿದುಬಂದಿದೆ.
ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಉಡುಪಿ: ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ 2025- 26ನೇ ಸಾಲಿನ ವಾರ್ಷಿಕ ಮಹಾಸಭೆ ಬುಧವಾರ ಉಡುಪಿಯ ಡಯಾನ ಹೋಟೆಲ್ ನ ಸುನಂದಾ ಸಭಾಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಸಂಸ್ಥೆಯು ನಿರಂತರ ಲಾಭದಲ್ಲಿ ನಡೆಯಲು ಸಹಕರಿಸಿದ ಸದಸ್ಯರು, ನಿರ್ದೇಶಕರು, ಪಿಗ್ಮಿ ಸಂಗ್ರಹಕರು ಹಾಗೂ ವ್ಯವಹಾರ ನಡೆಸಿದ ಗ್ರಾಹಕರನ್ನು ಅಭಿನಂದಿಸಿ ಮಾತನಾಡಿದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು, ಉಡುಪಿ ಜಿಲ್ಲೆಯ ಹೋಟೆಲ್ ಉದ್ದಿಮೆದಾರರು ಹೆಚ್ಚಿನ […]
ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯ 5 ಬಿ.ಆರ್.ಸಿ ಕೇಂದ್ರಗಳಲ್ಲಿ ತಲಾ ಒಬ್ಬರಂತೆ ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಯನ್ನು ಸಮಾಲೋಚಕ ಆಧಾರದ ಮೇಲೆ ನೇಮಕ ಮಾಡಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ (ಅವಶ್ಯವಿರುವ ಸಂದರ್ಭ ಪ್ರಾಥಮಿಕ ಶಾಲಾ ಮಕ್ಕಳಿಗೂ ಸಹ) ಸೇವೆಯನ್ನು ಒದಗಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 28 ರಿಂದ 40 ವರ್ಷದೊಳಗಿನ, ಮನೋವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಕೌನ್ಸೆಲಿಂಗ್ ಮನೋವಿಜ್ಞಾನ ಅಥವಾ ಸಂಬoಧಿತ ವಿಷಯಗಳಲ್ಲಿ ಎಂಎ/ಎoಎಸ್‌ಸಿ ಪದವಿ […]
ಅನಿವಾಸಿ ಭಾರತೀಯ ಹನೀಫ್ ಮೂಳೂರು ಅಭಿಮಾನಿ ಬಳಗದಿಂದ ಡಾ.ಫಾರೂಕ್ ಚಂದ್ರನಗರ ಇವರಿಗೆ ಅಭಿವೃದ್ಧಿ ರತ್ನ ಪದಕ ಪುರಸ್ಕಾರ

ಕಾಪು: ಅನಿವಾಸಿ ಭಾರತೀಯ ಉದ್ಯಮಿ ಸಮಾಜ ಸೇವಕ ಹನೀಫ್ ಮೂಳೂರು (ಕೆ.ಎಸ್.ಎ)ಅಭಿಮಾನಿ ಬಳಗದಿಂದ ಬದ್ರಿಯ ಜುಮ್ಮಾ ಮಸ್ಜಿದ್ (ರಿ.)ಮಲ್ಲಾರು -ಮಜೂರು ಅಧ್ಯಕ್ಷ ಸಮಾಜ ಸೇವಕ ಡಾ.ಎಂ ಫಾರೂಕ್ ಚಂದ್ರನಗರ ಇವರಿಗೆ ಬಿ.ಜೆ.ಎಂ ಮಿಲಾದುನ್ನಬಿ ಕಾರ್ಯಕ್ರಮದ ವೇದಿಕೆಯಲ್ಲಿ ಕಳೆದ 2 ವರ್ಷದಲ್ಲಿ ಮಸ್ಜಿದ್ ನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಮಸ್ಜಿದ್ ಇನ್ನಷ್ಟು ಅಂದ ಚಂದ ಹೆಸರುವಾಸಿಯಾಗಲು ಕಾರಣರಾದ ತಮಗೆ ಅಭಿವೃದ್ಧಿ ರತ್ನ ಪದವಿ ಬೆಳ್ಳಿಯ ಪದಕ ಪುರಸ್ಕಾರವನ್ನು ಬಿ.ಜೆ.ಎಂ ಮುದರೀಸ್ ಬಹು|ಸಯ್ಯಿದ್ ಮುಹಮ್ಮದ್ ಶಹಿರ್ ಅಲ್ ಹಿಕಮಿ ಅಲ್ […]