ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಉಡುಪಿ ಜ್ಞಾನಸುಧಾ ಪಿ.ಯು.ಕಾಲೇಜಿನ ಆಶ್ರಯದಲ್ಲಿ ನವೆಂಬರ್ 29 ಹಾಗೂ 29 ರಂದು ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ, ಕಾರ್ಕಳ ಜ್ಞಾನಸುಧಾದ ಕಾರ್ತಿಕ್ ವೈ 1500 ಮೀಟರ್ ರೇಸ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಂಜನ ವಿ ಬೆಸ್ಕೂರ್ ಡಿಸ್ಕಸ್ ತ್ರೋ ನಲ್ಲಿ ತೃತೀಯ ಹಾಗೂ 4*100 ಮೀ ರಿಲೇಯಲ್ಲಿ ಸನ್ನಿಧಿ ಶೆಟ್ಟಿ, ಸನ್ನಿಧಿ, ಸನ್ನಿಧಿ ಪೂಜಾರಿ ಹಾಗೂ ಅದಿತಿ ಶೆಟ್ಟಿ ಇವರು ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿದ್ಯಾರ್ಥಿಗಳನ್ನು ಎಪಿಜಿಇಟಿ ಯ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.