ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜೆಪ್ಪು ಮಾರ್ಕೇಟ್ – ಎಂಪಾಸಿಸ್ ನಡುವಿನ ರಸ್ತೆ ಕಾಂಕ್ರೀಟೀಕರಣದ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯರು ಗುದ್ದಲಿಪೂಜೆ ನಡೆಯಿತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಮಂಗಳೂರಿನ ಯಾವ ಭಾಗವೂ ಕೂಡ ಅಭಿವೃದ್ಧಿಯ ವಿಚಾರದಲ್ಲಿ ಹಿಂದುಳಿಯಬಾರದು. ಗುಜ್ಜರಕೆರೆಯ ಸಾರ್ವಜನಿಕರು ರಸ್ತೆ ಅಭಿವೃದ್ಧಿಗೊಳಿಸುವಂತೆ ಕೋರಿಕೊಂಡಿದ್ದರು. ಈಗ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ ಎಂದರು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆಗಳಾಗಬಹುದು ಆದರೆ ಅಭಿವೃದ್ಧಿಯ ದೃಷ್ಟಿಯಿಂದ ನಿಮ್ಮೆಲ್ಲರ ಪೂರ್ಣ ಪ್ರಮಾಣದ ಸಹಕಾರ ದೊರೆತರೆ ಕಾಮಗಾರಿಯೂ ಶೀಘ್ರವಾಗಿ ನೆರವೇರುವುದು ಎಂದಿದ್ದಾರೆ.
ಬಿಜೆಪಿ ಮುಖಂಡ ಭಾಸ್ಕರ್ ಚಂದ್ರ ಶೆಟ್ಟಿ ಮಾತನಾಡಿ, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರವು ಶಾಸಕ ವೇದವ್ಯಾಸ್ ಕಾಮತ್ ಅವರ ಮುಂದಾಳತ್ವದಲ್ಲಿ ಅಭಿವೃದ್ಧಿಯತ್ತ ಶರವೇಗದಲ್ಲಿ ಸಾಗುತ್ತಿದೆ. ಸಾರ್ವಜನಿಕರ ಬೇಡಿಕೆಗಳು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಶಾಸಕರ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯೋಗೀಶ್ ಕುಮಾರ್ ಜೆಪ್ಪು, ಬಿಜೆಪಿ ಮುಖಂಡರಾದ ಉಮನಾಥ್ ಬೋಳಾರ, ದೀಪಕ್ ಪೈ, ಲಲ್ಲೇಶ್ ಕುಮಾರ್, ದೇವದಾಸ್ ಶೆಟ್ಟಿ , ಸುಧೀಂದ್ರ ಪ್ರಕಾಶ್, ಶಿವಪ್ರಸಾದ್ ಬೋಳಾರ, ಮೋಹನ್ ಕುಮಾರ್, ಶ್ಯಾಮ್ ಸುಂದರ್ ಶೆಟ್ಟಿ, ಮುರಳೀಧರ್ ಬೋಳಾರ, ಉಷಾ ಅರೆಕೆರೆಬೈಲ್, ಹೇಮಲತಾ, ಭಾನುಮತಿ, ವಿದ್ಯಾ ಹಾಗೂ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ನೇಮು ಕೊಟ್ಟಾರಿ, ವೇಣುಗೋಪಾಲ ಪುತ್ರನ್, ದಯಾನಂದ ರಾವ್ ಉಪಸ್ಥಿತರಿದ್ದರು.