udupixpress
Home Trending ಮಾಜಿ ಭೂಗತ ದೊರೆ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್. ಮುತ್ತಪ್ಪ ರೈ ಇನ್ನಿಲ್ಲ

ಮಾಜಿ ಭೂಗತ ದೊರೆ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್. ಮುತ್ತಪ್ಪ ರೈ ಇನ್ನಿಲ್ಲ

ಬೆಂಗಳೂರು: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ, ಮಾಜಿ ಭೂಗತ ದೊರೆ, ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ , ಉದ್ಯಮಿ ಎನ್ ಮುತ್ತಪ ರೈ ಇಂದು ಬೆಳಗ್ಗಿನ ಜಾವ 2.10ಕ್ಕೆ ಇಹಲೋಕ ತ್ಯಜಿಸಿದರು.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ‌ ಹಿಂದೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 68  ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮುತ್ತಪ್ಪ ರೈ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ‌ ಅಧ್ಯಕ್ಷ. ತಂದೆ ದಿ. ಎನ್ ನಾರಾಯಾಣ‌ ರೈ, ತಾಯಿ ದಿ. ಸುಶೀಲ ರೈ. ರೈಯವರಿ ರಿಕ್ಕಿ ಹಾಗೂ ರಾಕಿ ಎಂಬ ಇಬ್ಬರು ಮಕ್ಕಳಿದ್ದಾರೆ. ಮೂಲತಃ ದ.ಕ. ಜಿಲ್ಲೆಯ ಪುತ್ತೂರಿನ ಮಾಡವು ನಿವಾಸಿಯಾಗಿದ್ದ ಅವರು ಸದ್ಯ ಬೆಂಗಳೂರಿನ ಬಿಡದಿಯಲ್ಲಿ ನೆಲೆಸಿದ್ದರು.

error: Content is protected !!