ಗಂಡು ಮಗುವನ್ನು ಬರಮಾಡಿಕೊಂಡ ಜಸ್ಪ್ರೀತ್ ಬುಮ್ರಾ ದಂಪತಿಗಳು

ಮುಂಬೈ: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸೋಮವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಗನ ಜನನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

“ನಮ್ಮ ಪುಟ್ಟ ಕುಟುಂಬ ಬೆಳೆದಿದೆ ಮತ್ತು ನಮ್ಮ ಹೃದಯಗಳು ನಾವು ಊಹಿಸಿಕೊಳ್ಳಲಾರದಷ್ಟು ತುಂಬಿ ಬಂದಿವೆ! ಇಂದು ಬೆಳಿಗ್ಗೆ ನಾವು ನಮ್ಮ ಪುಟ್ಟ ಹುಡುಗ ಅಂಗದ್ ಜಸ್ಪ್ರೀತ್ ಬುಮ್ರಾ ಅವರನ್ನು ಜಗತ್ತಿಗೆ ಸ್ವಾಗತಿಸಿದೆವು. ನಾವು ಚಂದ್ರನ ಮೇಲಿದ್ದೇವೆ ಮತ್ತು ನಮ್ಮ ಜೀವನದ ಈ ಹೊಸ ಅಧ್ಯಾಯವು ಅದರೊಂದಿಗೆ ತರುವ ಎಲ್ಲದಕ್ಕೂ ಕಾತುರರಾಗಿದ್ದೇವೆ – ಜಸ್ಪ್ರಿತ್ ಮತ್ತು ಸಂಜನಾ, ” ಎಂದು X ನಲ್ಲಿ ಬರೆದುಕೊಂಡಿದ್ದಾರೆ.

29 ವರ್ಷ ವಯಸ್ಸಿನ ಬುಮ್ರಾ ಭಾನುವಾರ ಶ್ರೀಲಂಕಾದಲ್ಲಿರುವ ಭಾರತೀಯ ತಂಡವನ್ನು ತೊರೆದು ಮುಂಬೈನಲ್ಲಿರುವ ತಮ್ಮ ಹೆಂಡತಿ ಸಂಜನಾ ಗಣೇಶನ್ ಬಳಿ ಬಂದಿದ್ದಾರೆ. ಬುಮ್ರಾ ನೇಪಾಳದ ವಿರುದ್ದದ ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ. ಸೂಪರ್ 4 ಹಂತಕ್ಕೂ ಮುನ್ನ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಲಂಕಾದಲ್ಲಿ ಕೆಲವು ದಿನಗಳ ವಿರಾಮದ ನಂತರ ಭಾರತ ತಂಡವು ತಮ್ಮ ಸೂಪರ್ 4 ಪಂದ್ಯವನ್ನು ಆಡಲಿದೆ ಮತ್ತು ಬುಮ್ರಾ ಅವರು ಬೇಗನೆ ಮರಳುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ.