ಡಬ್ಬಲ್ ಡೆಕ್ಕರ್ ಬಸ್ ಜಮಾನ : ಮತ್ತೆ ಬೆಂಗಳೂರಿನಲ್ಲಿ ಆರಂಭ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡಬ್ಬಲ್ ಡೆಕ್ಕರ್ ಬಸ್​​ಗಳ ಜಮಾನ ಮತ್ತೆ ಶುರುವಾಗಲಿದೆ. ಪ್ರಾಯೋಗಿಕವಾಗಿ ಐದು ಮಾರ್ಗದಲ್ಲಿ ಡಬ್ಬಲ್ ಡೆಕ್ಕರ್ ಬಸ್​​ಗಳು ಸಂಚರಿಸಲಿವೆ.ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಸಾರವಾಗಿ ಬಸ್​​ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸದ್ಯದಲ್ಲೇ ಡಬ್ಬಲ್ ಡೆಕ್ಕರ್ ​​ಬಸ್​​ಗಳ ಸಂಚಾರ ಆರಂಭ ಆಗಲಿದೆ. ಕಲಾಸಿಪಾಳ್ಯ ಟಿಟಿಎಂಸಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಬ್ಬಲ್ ಡೆಕ್ಕರ್ ಬಸ್​​ಗಳಿಗೆ ಟೆಂಡರ್ ಕರೆಯಲಾಗಿದೆ. ಒಂದು ವಾರದಲ್ಲಿ ಟೆಂಡರ್ ಪೂರ್ಣವಾಗಲಿದೆ. ಮೊದಲ ಹಂತವಾಗಿ 5 ಡಬ್ಬಲ್ ಡೆಕ್ಕರ್ ಬಸ್​​ಗಳನ್ನು […]

‘ಸಪ್ಲೈಚೈನ್ ಲೀಡರ್ ಶಿಪ್​ -ಎಕ್ಸ್​​​​ಪ್ರೆಸ್ ಲಾಜಿಸ್ಟಿಕ್ ಪ್ರಶಸ್ತಿಗೆ ಕೆಎಸ್‌ಆರ್​ಟಿಸಿ ಭಾಜನ

ಬೆಂಗಳೂರು : ದೇಶದ ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ಸಂಸ್ಥೆಗಳ ನಿರ್ವಹಣೆಯಲ್ಲಿ ಪ್ರಶಸ್ತಿಗಳ ಬೇಟೆಯನ್ನು ಮುಂದುವರೆಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತಿಷ್ಠಿತ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿ ಲಭಿಸಿದೆ.ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ಕೆಎಸ್‌ಆರ್​ಟಿಸಿಗೆ ಪ್ರತಿಷ್ಠಿತ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿ, ಎಕ್ಸ್ ಪ್ರೆಸ್ ಲಾಜಿಸ್ಟಿಕ್ ಪ್ರಶಸ್ತಿ ಲಭಿಸಿದೆ. ಇತ್ತೀಚೆಗಷ್ಟೇ ವಿ ಕನೆಕ್ಟ್ ಇಂಡಿಯಾ ಮೀಡಿಯಾ ಅಂಡ್ ರಿಸರ್ಚ್ ಸಂಸ್ಥೆಯಿಂದ ಕೊಡಲಾಗುವ ಏಷ್ಯಾದ ಬ್ಯುಸಿನೆಸ್ ಕ್ವಾಲಿಟಿ ಪ್ರಶಸ್ತಿಗಳಲ್ಲಿ ನಾಲ್ಕು ವರ್ಗದಲ್ಲಿ ಕೆಎಸ್​ಆರ್​ಟಿಸಿಗೆ […]

ವಿಧಾನಸೌಧದಲ್ಲಿ ಅದ್ದೂರಿ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಸಮಾರಂಭ ; ನಾಳೆ ಶಿಕ್ಷಕರ ದಿನಾಚರಣೆ

ಬೆಂಗಳೂರು: ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ನಿಮಿತ್ತ ನಾಳೆ ವಿಧಾನಸೌಧದಲ್ಲಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ, ನ್ಯಾಕ್ ಪುರಸ್ಕೃತ ಕಾಲೇಜುಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಾಳೆ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಹಾಗೂ ಮಾತೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ನಂತರ ಪ್ರಾಥಮಿಕ ಹಾಗೂ ಪ್ರೌಢ […]

3 ಮಿಲಿಯನ್ ಡಾಲರ್ ಹೂಡಿಕೆ ಪ್ರಕೃತಿ ಆಧರಿತ ಯೋಜನೆಗಳಿಗೆ ಮಾಡಲಿದೆ ಅಮೆಜಾನ್

ನವದೆಹಲಿ: ಭಾರತದಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಲ್ಲಿ 3 ಮಿಲಿಯನ್ ಡಾಲರ್ ಆರಂಭಿಕ ಹೂಡಿಕೆ ಮಾಡುವುದಾಗಿ ಇ-ಕಾಮರ್ಸ್ ದೈತ್ಯ ಅಮೆಜಾನ್ ಸೋಮವಾರ ತಿಳಿಸಿದೆ. ಏಷ್ಯಾ ಪೆಸಿಫಿಕ್ (ಎಪಿಎಸಿ) ನಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಿಗೆ ಕಂಪನಿಯು ನಿಗದಿಪಡಿಸಿದ 15 ಮಿಲಿಯನ್ ಡಾಲರ್ ನಿಧಿಯ ಭಾಗವಾಗಿ ಈ ಹೂಡಿಕೆ ಮಾಡಲಾಗುವುದು. ಭಾರತದಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಿಗಾಗಿ ನಿಧಿಯ ಎಪಿಎಸಿ ಪಾಲಿನ ಮೊದಲ 3 ಮಿಲಿಯನ್ ಡಾಲರ್ ಬಳಸಲಾಗುವುದು ಎಂದು ಅಮೆಜಾನ್ ಹೇಳಿದೆ. ಪರಿಸರ ಸಂರಕ್ಷಣೆಯ ಯೋಜನೆಗಳಿಗಾಗಿ ಭಾರತದಲ್ಲಿ ಆರಂಭಿಕವಾಗಿ 3 ಮಿಲಿಯನ್ […]

ವಿಕ್ರಂ ಲ್ಯಾಂಡರ್ ರಿಸಿವರ್ ಆನ್: ಹೊಸ ಫೋಟೋ ಹಂಚಿಕೊಂಡ ಇಸ್ರೋ

ನವದೆಹಲಿ : ಚಂದ್ರಯಾನ 3 ರ ರೋವರ್ ಪ್ರಗ್ಯಾನ್ ಚಂದ್ರನ ಅಂಗಳದಲ್ಲಿ ಒಂದು ದಿನದ ಕಾರ್ಯಾಚರಣೆ ಪೂರ್ಣಗೊಳಿಸಿದೆ. ಇದೀಗ ಪೆಲೋಡ್​ಗಳು ಸ್ವಿಚ್ಡ್​​ ಆಫ್ ಆಗಿವೆ.ಲ್ಯಾಂಡರ್ ವಿಕ್ರಂನ ಪೆಲೋಡ್​ ಸ್ವಿಚ್ಡ್​​​ ಆಫ್ ಆಗಿದೆ. ಆದರೆ, ರಿಸೀವರ್ ಆನ್ ಆಗಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಲ್ಯಾಂಡರ್​ನ ರಿಸಿವರ್ ಆನ್ ಆಗಿದೆ. ಪ್ರಗ್ಯಾನ್ ಸೋಲರ್​ ಫಲಕದಿಂದ ಅದರ ಬ್ಯಾಟರಿ ಚಾರ್ಜ್​ ಆಗುವರೆಗೆ ವಿಕ್ರಮ್ ಲ್ಯಾಂಡರ್​ ನಿದ್ರೆಗೆ ಜಾರಿರುತ್ತದೆ ಎಂದು ಇಸ್ರೋ ಟ್ವೀಟ್​ ಮೂಲಕ ತಿಳಿಸಿದೆ. ಅಲ್ಲದೇ, ಇದೀಗ ಚಂದ್ರನ […]