ಮುಂಬಯಿ : ಪ್ರೊ ಕಬಡ್ಡಿ ಲೀಗ್ನ ಆರನೇ ಆವೃತ್ತಿಯ ಫೈನಲ್ ಇಂದು ರಾತ್ರಿ 8 ಗಂಟೆಗೆ ಮುಂಬಯಿಯಲ್ಲಿ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಫಾರ್ಚೂನ್ಜೈಂಟ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಸತತ ಮೂರು ತಿಂಗಳು ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದ್ದ ಈ ಬಾರಿಯ ಟೂರ್ನಿಗೆ ಜ.5ರಂದು ತೆರೆಬೀಳಲಿದೆ.
ಡಿ.31ರಂದು ನಡೆದ ಮೊದಲ ಕ್ವಾಲಿಫೈಯರ್ನಲ್ಲಿ ಬುಲ್ಸ್ ಮತ್ತು ಫಾರ್ಚೂನ್ಜೈಂಟ್ಸ್ ಮುಖಾಮುಖಿಯಾಗಿದ್ದವು. ಆಗ ಬೆಂಗಳೂರಿನ ತಂಡ 12 ಪಾಯಿಂಟ್ಸ್ಗಳಿಂದ ಗೆದ್ದು ನೇರವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತ್ತು. ಮೊದಲಾರ್ಧದಲ್ಲಿ ಹಿನ್ನಡೆ ಕಂಡಿದ್ದ ರೋಹಿತ್ ಪಡೆ ದ್ವಿತೀಯಾರ್ಧದಲ್ಲಿ ಅಮೋಘ ಸಾಮರ್ಥ್ಯ ತೋರಿ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿತ್ತು. ಹಿಂದಿನ ಈ ಗೆಲುವು ಬೆಂಗಳೂರು ಬುಲ್ಸ್ ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.