ಉಡುಪಿ: ಉಡುಪಿಯ ಶ್ರೀಕೃಷ್ಣ ಮಠ, ಸೇಂಟ್ ಮೇರಿಸ್ ದ್ವೀಪ, ಮಲ್ಪೆ ಬೀಚ್, ಗಂಗೊಳ್ಳಿ ಕಡಲ ಕಿನಾರೆ ಹಾಗೂ ಇತರ ಪ್ರದೇಶಗಳನ್ನು ಕಣ್ತುಂಬಿ ಕೊಳ್ಳುವ, ಆಸ್ವಾದಿಸುವ ಮತ್ತೊಂದು ಅವಕಾಶ ಉಡುಪಿಗೆ ಆಗಮಿಸುವ ಪ್ರವಾಸಿಗರಿಗೆ ದೊರೆಯಲಿದೆ.
ಉಡುಪಿ ಜಿಲ್ಲಾಡಳಿತ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಹೆಲಿಟೂರಿಸಂ ಈಗಾಗಲೇ ಆರಂಭಿಸಿದ್ದು, ಪ್ರವಾಸಿಗರು ಹೆಲಿಕಾಪ್ಟರ್ ಮೂಲಕ ಆಯಾ ಪ್ರದೇಶಗಳ ಸೌಂದರ್ಯ ಆಸ್ವಾದಿಸಬಹುದು. ಈಗಾಗಲೇ ೪, ೫ ಹಾಗೂ ೬ರಂದು ಪ್ರವಾಸಿಗರಿಗೆ ಒಂದು ಸುತ್ತಿನಲ್ಲಿ ನಡೆದಿದ್ದು, ಈಗ ಮತ್ತೊಮ್ಮೆ ನವರಿ ೧೧, ೧೨ ಹಾಗೂ ೧೩ರಂದು ಆದಿ ಉಡುಪಿಯ ಎನ್ಸಿಸಿ ಮೈದಾನದಿಂದ ಆಕಾಶಕ್ಕೆ ಹಾರಬಹುದು. ಹೆಲಿಟೂರಿಸಂಗೆ ಉಡುಪಿ ಹಾಗೂ ಕುಂದಾಪುರ ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಕೋಟೇಶ್ವರದ ಯುವ ಮೆರಿಡಿಯನ್ ರೆಸಾರ್ಟ್ನಿಂದ ಜಾಯ್ ರೈಡ್ ಹಾಗೂ ಅಡ್ವೆಂಚರ್ ರೈಡ್ ಎಂಬ ಪ್ಯಾಕೇಜ್ಗಳಿವೆ. ಜಾಯ್ ರೈಡ್ ೮ ನಿಮಿಷದ ಪ್ರಯಾಣವಾಗಿದ್ದು, ತಲಾ ೨,೫೦೦ ರೂ. ಪಾವತಿಸಬೇಕು. ಅಡ್ವೆಂಚರ್ ರೈಡ್ ೧೦ ನಿಮಿಷದ ಪ್ರಯಾಣವಾಗಿದ್ದು, ತಲಾ ೩೦೦೦ ರೂ. ಪಾವತಿಸಬೇಕು. ಸಾಹಸಿ ಮನಸ್ಸುಗಳಿಗೆ ಅಡ್ವೆಂಚರ್ ರೈಡ್ ಖುಷಿ ಕೊಡಲಿದೆ.
ಸಖತ್ ಥ್ರಿಲ್ಲ್ :
ಪ್ರತಿ ರೈಡ್ನಲ್ಲಿ ೬ ಮಂದಿ ಕುಳಿತುಕೊಳ್ಳಬಹುದು. ಮೂರು ವರ್ಷಗಳಿಂದ ಹೆಲಿ ಟೂರಿಸಂ ಆಯೋಜಿಸುತ್ತಿದ್ದು, ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಚಿಪ್ಸನ್ ಏವಿಯೇಷನ್ ಹೆಲಿಕಾಪ್ಟರ್ ಪ್ರವಾಸಿಗರಿಗೆ ಥ್ರಿಲ್ ನೀಡಲಿದೆ. ಪೈಲಟ್ ರಮೇಶ್ ಗೋಪಿನಾಥ್ ಸಾರಥಿಯಾಗಿರಲಿದ್ದಾರೆ ಎನ್ನುತ್ತಾರೆ ಮಲ್ಪೆ ಬೀಚ್ ಅಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕ ಸುದೇಶ್ ಶೆಟ್ಟಿ.
ಒಂದು ರೋಚಕ ಅನುಭವ:
ಒಮ್ಮೆಯಾದರೂ ಈ ರೋಚಕ ಅನುಭವ ಪಡೆಯಬೇಕು ಎನ್ನುವ ಅವರು, ಪ್ರತಿದಿನ ೩೦ ರೈಡ್ ಇರಲಿದೆ. ಪ್ರವಾಸಿಗರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಂಡರೆ ಅನುಕೂಲ. ಬುಕ್ಕಿಂಗ್ಗಾಗಿ ಮೊಬೈಲ್: ೯೭೪೧೨೪೮೭೧೬, ೯೭೪೧೨೪೯೩೨೮ ಸಂಪರ್ಕಿಸಬಹುದು. ಉಡುಪಿ ಜಿಯಲ್ಲಿ ಪ್ರವಾಸೋದ್ಯಕ್ಕೆ ವಿಫುಲ ಅವಕಾಶಗಳಿದ್ದು, ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ವಿಭಿನ್ನ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬೇಡಿಕೆ ಹೆಚ್ಚಾದರೆ ಇಲ್ಲೇ ಶಾಶ್ವತವಾಗಿ ಹೆಲಿಟೂರಿಸಂ ಮಾಡುವ ಯೋಚನೆ ಎನ್ನುತ್ತಾರೆ ಸಂದೇಶ್ ಶೆಟ್ಟಿ.