ಕಾರ್ಕಳ: ಜ.8 ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ ಜ. 26 ರಿಂದ ಜ. 30ರ ವರೆಗೆ ಜರಗಲಿದೆ.
‘ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ’ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ಉತ್ಸವದಲ್ಲಿ ಒಟ್ಟು 48 ಬಲಿ ಪೂಜೆಗಳು ನಡೆಯಲಿವೆ.
ಜ. 26ರ ಸಂಜೆ 6.30ಕ್ಕೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ (ಕೊಂಕಣಿಯಲ್ಲಿ), ಜ. 27ರ ಸಂಜೆ 6 ಗಂಟೆಗೆ ಚಿಕ್ಕಮಗಳೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಟಿ. ಅಂತೋಣಿ ಸ್ವಾಮಿ (ಕನ್ನಡ), ಜ. 28ರ ಪೂ. 11.30 ಕ್ಕೆ ಪುತ್ತೂರು ಧರ್ಮಾಧ್ಯಕ್ಷರ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಕಲಯಿಲ್ (ಕನ್ನಡ), ಸಂಜೆ 6ಕ್ಕೆ ಶಿವಮೊಗ್ಗ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್ ಸೆರಾವೊ ಎಸ್.ಜೆ. (ಕನ್ನಡ) ಜ. 29 ರ ಪೂ. 10.30ಕ್ಕೆ ಉಡುಪಿ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಲೋಬೋ (ಕೊಂಕಣಿ), ಸಂಜೆ 5.30ಕ್ಕೆ ಬೆಳ್ತಂಗಡಿ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕುಝಿ (ಕನ್ನಡ) ಮತ್ತು ಜ.30ರಂದು ಪೂ. 10.30ಕ್ಕೆ ಮಂಗಳೂರು ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ (ಕೊಂಕಣಿ) ಅವರು ಬಲಿಪೂಜೆ ನೆರವೇರಿಸಲಿರುವರು ಎಂದು ಧರ್ಮ ಕೇಂದ್ರದ ನಿರ್ದೇಶಕ ಹಾಗೂ ಪ್ರಧಾನ ಗುರು ವಂ| ಜಾರ್ಜ್ ಡಿ’ಸೋಜಾ ಹಾಗೂ ಕೇಂದ್ರದ ಪಾಲನಾ ಮಂಡಳಿಯ ಉಪಾಧ್ಯಕ್ಷ ಜಾನ್ ಡಿ’ಸಿಲ್ವ ಅವರು ತಿಳಿಸಿದ್ದಾರೆ.
ಜ. 26ರಂದು ಮಕ್ಕಳಿಗಾಗಿ ಮತ್ತು ಜ. 27ರಂದು ಕೊಂಕಣಿಯಲ್ಲಿ ವ್ಯಾಧಿಪ್ಠರಿಗಾಗಿ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ನಡೆಯಲಿದೆ.